ಪುತ್ತೂರು: ಬನ್ನೂರಿನ ಅಲುಂಬುಡದ ನಡೆದ ಆಟಿ ಆಚರಣೆ ಕೂಟವನ್ನು ಊರ ಗೌಡ ವಿಶ್ವನಾಥ ಗೌಡ ಕಲ್ಲಿಮಾರು ಉದ್ಘಾಟಿಸಿ, ಸಾಂಪ್ರದಾಯಿಕ ಆಚರಣೆಗಳ ಮಹತ್ತ್ವದ ಕುರಿತು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಸೀತಾರಾಮ ಕೇವಳ ಮಾತನಾಡಿ, ಆಟಿಯ ಅವಧಿಯಲ್ಲಿ ಹಿಂದಣ ಕಾಲದಲ್ಲಿ ಬಡತನವೇ ಇತ್ತು. ಆ ಪರಿಸ್ಥಿತಿಯಲ್ಲಿ ಉಣ್ಣಲು ತಿನ್ನಲು ಇರದಿದ್ದ ಕಾರಣಕ್ಕಾಗಿ ಜನರು ಗೆಡ್ಡೆ- ಗೆಣಸುಗಳ ಮತ್ತು ಸೊಪ್ಪು-ಕಾಯಿಗಳ ಮೊರೆ ಹೋಗುತ್ತಿದ್ದುದು ಅನಿವಾರ್ಯವಾಗಿತ್ತು. ಇಂದು ನಾವು ಸಾಕಷ್ಟು ಸುಖಿಗಳಾಗಿದ್ದೇವೆ. ಆದರೆ ಇತಿಹಾಸವನ್ನು ಮರೆಯಬಾರದು. ಹಾಗಾದಾಗ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ಸಾಧ್ಯವಾದೀತು ಎಂದರು. ಆಯೋಜಕರ ಶ್ರಮವನ್ನು ಅವರು ಮುಕ್ತಕಂಠದಿಂದ ಶ್ಲಾಘಿಸಿದರು.
ತಾಲೂಕು ಒಕ್ಕಲಿಗ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ ಮತ್ತು ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ನ ಅಧ್ಯಕ್ಷ ಕಳುವಾಜೆ ವೆಂಕಟ್ರಮಣ ಗೌಡ ಅವರು ಸಂದರ್ಭೋಚಿತವಾಗಿ ಮಾತನಾಡಿದರು.
ಒಕ್ಕಲಿಗ ಸ್ವಸಹಾಯ ಟ್ರಸ್ಟ್’ನ ಪ್ರಾಯೋಜಕತ್ವದಲ್ಲಿ ನಡೆದ ಕೂಟಕ್ಕೆ ಬನ್ನೂರಿನ ಒಕ್ಕಲಿಗ ಗೌಡ ಸೇವಾ ಸಂಘ, ಒಕ್ಕಲಿಗ ಸ್ವಸಹಾಯ ಸಂಘಗಳ ಒಕ್ಕೂಟ, ಯುವ ಒಕ್ಕಲಿಗ ಗೌಡ ಸೇವಾ ಸಂಘ ಮತ್ತು ಒಕ್ಕಲಿಗ ಗೌಡ ಮಹಿಳಾ ಸೇವಾ ಸಂಘಗಳ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.

ವೇದಿಕೆಯಲ್ಲಿ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ನ ಸಂಚಾಲಕ ಎ.ವಿ. ನಾರಾಯಣ, ಬನ್ನೂರಿನ ಒಕ್ಕಲಿಗ ಗೌಡ ಗ್ರಾಮ ಸಮಿತಿ ಅಧ್ಯಕ್ಷ ಸೂರಜ್ ಗೌಡ ಗೋಳ್ತಿಲ, ಸೋಮಪ್ಪ ಗೌಡ ಸಪ್ತಗಿರಿ ಉಪಸ್ಥಿತರಿದ್ದರು.
ತಮ್ಮಯ್ಯ ಗೌಡ, ಚಿದಾನಂದ ಹಲಂಗ, ಆನಂದ ಪಟ್ಟೆ, ಗಂಗಾಧರ ಗೌಡ, ಉಷಾ ಪದ್ಮನಾಭ ಮತ್ತು ಜಯರಾಮ ಹಿರಿಂಜ ಅತಿಥಿಗಳನ್ನು ಗೌರವಿಸಿದರು.
ಹರ್ಷಿತಾ ದೇವಸ್ಯ ಪ್ರಾರ್ಥಸಿದರು. ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್‌ನ ಪ್ರಾಂಶುಪಾಲ ಅಮರನಾಥ್ ಪಟ್ಟೆ ಸ್ವಾಗತಿಸಿದರು. ಸುಮಲತಾ ಹಲಂಗ ನಿರೂಪಿಸಿದರು. ಆಶಾಕಿರಣ ಯಶವಂತ ವಂದಿಸಿದರು.
























