ಕೆದಿಲದ ಮಹಿಳೆಯ ನಿಗೂಢ ಸಾವಿನ ಪ್ರಕರಣ : ಇಂದು ಬೆಳಗ್ಗೆ ಮನೆಗೆ ಬಂದ ಬಾವ

ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಬಾವ ಇಂದು ದಿಢೀರ್‌ ಪ್ರತ್ಯಕ್ಷ

ಪುತ್ತೂರು : ಕೆದಿಲ ಗ್ರಾಮದ ಕಾಂತಕೋಡಿ ಎಂಬಲ್ಲಿ ಕಳೆದ ಆ.6ರಂದು ಮಹಿಳೆಯ ಮೃತದೇಹ ಪತ್ತೆಯಾದ ದಿನವೇ ಮನೆಯಿಂದ ನಾಪತ್ತೆಯಾಗಿದ್ದ ಮಹಿಳೆಯ ಗಂಡನ ಅಣ್ಣ (ಮೃತರ ಬಾವ) ಭಾನುವಾರ ಬೆಳಗ್ಗೆ ವಾಪಸು ಬಂದಿದ್ದಾರೆ.

ಕೆದಿಲ ಒಳಕುಮೇರಿಯ ಗಣಪತಿ ಯಾನೆ ರಾಮಣ್ಣ ಗೌಡ ಎಂಬವರ ಪತ್ನಿ ಮಮತಾ ಎಂಬವರ ಮೃತದೇಹ ಆ.6ರಂದು ಬೆಳಗ್ಗೆ ಕೆದಿಲ ಗ್ರಾಮದ ತೋಡಿನಲ್ಲಿ ಪತ್ತೆಯಾಗಿತ್ತು. ಅದೇ ದಿನ ರಾಮಣ್ಣ ಗೌಡರ ಅಣ್ಣ ಸುಂದರ ಯಾನೆ ಲೋಕಯ್ಯ ಗೌಡ ಕೂಡ ನಾಪತ್ತೆಯಾಗಿದ್ದರು.





















































 
 

ಹೀಗಾಗಿ ಮಮತಾ ಸಾವಿಗೆ ಲೋಕಯ್ಯ ಗೌಡ ಕಾರಣವಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿತ್ತು. ರಾಮಣ್ಣ ಗೌಡರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದರು.

ಇದೀಗ ನಾಲ್ಕು ದಿನಗಳ ಬಳಿಕ ಭಾನುವಾರ ಬೆಳಗ್ಗೆ ಲೋಕಯ್ಯ ಗೌಡ ದಿಢೀರ್‌ ಎಂದು ಮನೆಗೆ ಬಂದಿದ್ದಾರೆ. ಮನೆಯವರು ಅವರನ್ನು ಹಿಡಿದುಕೊಂಡು ನಾನಾ ರೀತಿಯಲ್ಲಿ ಪ್ರಶ್ನಿಸಿದ್ದು, ಪೊಲೀಸರು ವಿಷಯ ತಿಳಿದ ಕೂಡಲೇ ರಾಮಣ್ಣ ಗೌಡರ ಮನೆಗೆ ಧಾವಿಸಿದ್ದಾರೆ.

ಲೋಕಯ್ಯ ಗೌಡರಿಗಾಗಿ ಪೊಲೀಸರು ಮನೆಯ ಆಸುಪಾಸು ಇರುವ ಕಾಡು ಮತ್ತಿತರೆಡೆ ಹುಡುಕಾಡಿದ್ದರು. ಪತ್ನಿ ಪರಿತ್ಯಕ್ತರಾಗಿರುವ ಲೋಕಯ್ಯ ಗೌಡ ಬಹಳ ವರ್ಷಗಳಿಂದ ರಾಮಣ್ಣ ಗವಡರ ಮನೆಯಲ್ಲಿಯೇ ವಾಸವಾಗಿದ್ದರು ಎನ್ನಲಾಗಿದೆ. ಆಗಾಗ ಈ ವಿಚಾರವಾಗಿ ಮನೆಯಲ್ಲಿ ಮಾತಿನ ಚಕಮಕಿಯೂ ನಡೆಯುತ್ತಿತ್ತು ಎನ್ನಲಾಗಿದ್ದು, ಹೀಗಾಗಿ ಅವರ ಮೇಲೆಯೇ ಅನುಮಾನ ಬಂದಿತ್ತು.

error: Content is protected !!
Scroll to Top