ವಾಷಿಂಗ್ಟನ್: ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿಶ್ವದ ಇತರ ದೇಶಗಳ ಜೊತೆಗೆ ಟ್ರೇಡ್ ವಾರ್ ಆರಂಭಿಸಿದ್ದು, ಅವರನ್ನು ಅವರೇ ನಾಶ ಮಾಡಿಕೊಳ್ಳುತ್ತಿದ್ದಾರೆ ಎಂದು ಅಮೆರಿಕನ್ ಅರ್ಥಶಾಸ್ತ್ರಜ್ಞ ಮತ್ತು ಜಾನ್ ಹಾಪ್ಕಿನ್ಸ್ ವಿವಿಯ ಪ್ರೊಫೆಸರ್ ಸ್ಟೀವ್ ಹ್ಯಾಂಕೆ ಹೇಳಿದ್ದಾರೆ.
ಸಂಪೂರ್ಣ ಅಸಂಬದ್ಧ ಸುಂಕ ನೀತಿ ಟ್ರಂಪ್ ಅವರದ್ದು. ಅವರ ಅರ್ಥಶಾಸ್ತ್ರ ಸಂಪೂರ್ಣ ತಪ್ಪು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಮೆರಿಕಾವು ಭಾರತದ ಸರಕುಗಳಿಗೆ ಸುಂಕ ಹೆಚ್ಚಿಸಿರುವ ಬೆನ್ನಲ್ಲೇ ಹ್ಯಾಂಕ್ ಅವರು ಹೇಳಿಕೆ ನೀಡಿದ್ದು, ನೆಪೋಲಿಯನ್ ಸಲಹೆಯನ್ನು ಅನುಸರಿಸುವುದು, ತನ್ನನ್ನು ತಾನು ನಾಶ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಶತ್ರುಗಳ ಜೊತೆ ಎಂದಿಗೂ ಹಸ್ತಕ್ಷೇಪ ಮಾಡಬೇಡಿ. ಟ್ರಂಪ್ ತನ್ನನ್ನು ತಾನೇ ನಾಶಪಡಿಸಿಕೊಳ್ಳುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ” ಎಂದು ನುಡಿದಿದ್ದಾರೆ.
ಭಾರತಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ, ವಿದೇಶಾಂಗ ಸಚಿವ ಎಸ್. ಜೈಶಂಕರ್ ತಮ್ಮ ಕಾರ್ಡ್‌ಗಳನ್ನು ಎದೆಯ ಹತ್ತಿರ ಇಟ್ಟುಕೊಂಡು ಸ್ವಲ್ಪ ಸಮಯ ಕಾಯಬೇಕು. ಟ್ರಂಪ್ ಅವರ ಕಾರ್ಡ್‌ಗಳ ಮನೆ ಕುಸಿಯುತ್ತದೆ ಎಂದು ನಾನು ಭಾವಿಸುತ್ತೇನೆ. ಸುಂಕಗಳ ಮೇಲಿನ ಆರ್ಥಿಕ ನಡುಕ ಮರಳಿನ ಮೇಲೆ ನಿಂತಿರುವುದಾಗಿ ಅವರು ತಿಳಿಸಿದ್ದಾರೆ.
























