ಅಪಘಾತದಲ್ಲಿ ಮೃತಪಟ್ಟ ಅಗ್ನಿವೀರ ಯೋಧ: ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

ಸಾಗರ: ಮೈಸೂರಿನಲ್ಲಿ ನಡೆದ ಅಪಘಾತವೊಂದರಲ್ಲಿ ಉಳ್ಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಜಿಗಳೆಮನೆ ನಿವಾಸಿ ಅಗ್ನಿವೀರ ಯೋಧ ಮೃತಪಟ್ಟಿದ್ದಾರೆ.

ಯೋಧ ಪ್ರಜ್ವಲ್ (21) ಮೃತ ದುರ್ದೈವಿ. ಕಳೆದ ಎರಡು ವರ್ಷಗಳಿಂದ ಇವರು ಅಗ್ನಿವೀರ್ ನೇಮಕಾತಿಯಡಿ ‌ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಸಿಕ್ಕಿಂ‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಕಳೆದ ವಾರವಷ್ಚೇ ರಜೆಯ ಕಾರಣಕ್ಕೆ ಊರಿಗೆ ಬಂದಿದ್ದರು. ಖಾಸಗಿ ಕೆಲಸದ ಕಾರಣದಿಂದ ಮೈಸೂರಿಗೆ ತೆರಳಿದ್ದ ಅವರು ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಪ್ರಜ್ವಲ್ ಮೃತದೇಹವನ್ನು ‌ಸ್ವಗ್ರಾಮಕ್ಕೆ ತಂದು ಅಂತ್ಯಕ್ರಿಯೆ ನಡೆಸಲಾಯಿತು. ಸಕಲ ಸರ್ಕಾರಿ ಗೌರವಗಳ ಜೊತೆಗೆ ಮೃತ ಯೋಧನಿಗೆ ಅಂತಿಮ ವಿದಾಯ ಹೇಳಲಾಯಿತು.





















































 
 
error: Content is protected !!
Scroll to Top