ಧರ್ಮಸ್ಥಳ ಪ್ರಕರಣ: ಬಾಹುಬಲಿ ಬೆಟ್ಟದ ಕೆಳಭಾಗದ ಕಾಡಿನಲ್ಲಿ SIT ಕಾರ್ಯಾಚರಣೆ

ಧರ್ಮಸ್ಥಳ: ನೂರಾರು ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣದಲ್ಲಿ SIT ಅಧಿಕಾರಿಗಳು ದೂರುದಾರ ಅನಾಮಿಕ ಗುರುತಿಸಿದ ಹೊಸ ಸ್ಥಳದಲ್ಲಿ ಶನಿವಾರ ಶೋಧ ಕಾರ್ಯ ನಡೆಸಿದ್ದಾರೆ.

ಧರ್ಮಸ್ಥಳದ ಮುಖ್ಯದ್ವಾರದ ಹತ್ತಿರವಿರುವ ಬಾಹುಬಲಿ ಬೆಟ್ಟದ ಕೆಳಭಾಗದ ಅರಣ್ಯದಲ್ಲಿ ಶೋಧ ಕಾರ್ಯ ಆರಂಭ ಮಾಡಿದೆ. SIT ಅಧಿಕಾರಿಗಳು ಜೊತೆಗೆ ಅರಣ್ಯ ಇಲಾಖಾ ಅಧಿಕಾರಿಗಳು, ಎ.ಸಿ., ತಹಶೀಲ್ದಾರ್ ಮೊದಲಾದವರು ಸ್ಥಳದಲ್ಲಿ ಹಾಜರಿದ್ದಾರೆ.

ಈಗಾಗಲೇ ಆರಂಭದಲ್ಲಿ ಗುರುತಿಸಿದ 13 ಸ್ಥಳಗಳ ಪೈಕಿ 12 ರಲ್ಲಿ ಮತ್ತು ಹೊಸ ಸ್ಥಳಗಳಲ್ಲಿ SIT ಅಧಿಕಾರಿಗಳು ಶವ ಹೂತಿಡಲಾಗಿದೆ ಎಂದು ಅನಾಮಿಕ ದೂರುದಾರ ಗುರುತು ಮಾಡಿದ ಹೊಸ ಸ್ಥಳಗಳಲ್ಲಿಯೂ ಶೋಧ ನಡೆಸಿತ್ತು. ಇಂದು ಬಾಹುಬಲಿ ಬೆಟ್ಟದ ಕೆಳ ಭಾಗದಲ್ಲಿ SIT ಶೋಧ ನಡೆಸಲಾರಂಭಿಸಿದೆ.





















































 
 

ಈ ಭಾಗದಲ್ಲಿ ದೂರುದಾರ ಅನಾಮಿಕ ಎಷ್ಟು ಸ್ಥಳಗಳನ್ನು ಗುರುತು ಮಾಡಿದ್ದಾನೆ ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಿದೆ.

error: Content is protected !!
Scroll to Top