ಪುತ್ತೂರು ಲಕ್ಷ್ಮೀದೇವಿ ಬೆಟ್ಟದಲ್ಲಿರುವ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆ

ಪುತ್ತೂರು: ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ಶ್ರೀ ಲಕ್ಷ್ಮೀ ದೇವಿ ಬೆಟ್ಟದಲ್ಲಿ ವರಮಹಾಲಕ್ಷ್ಮೀ ಪೂಜೆಯ ಪ್ರಯುಕ್ತ ಶುಕ್ರವಾರ ಶ್ರೀ ಮಹಾಲಕ್ಷ್ಮೀಗೆ ವಿಶೇಷ ಅಲಂಕಾರ, ಮಹಾಪೂಜೆ ಜರಗಿತು.
ಬಳಿಕ ಶ್ರೀಕೃಷ್ಣ ಉಪಾಧ್ಯಾಯ ಅವರ ಪುರೋಹಿತ್ಯದಲ್ಲಿ ವರಮಹಾಲಕ್ಷ್ಮೀ ಪೂಜೆ ನೆರವೇರಿತು.


ಈ ಸಂದರ್ಭದಲ್ಲಿ ಕ್ಷೇತ್ರದ ಧರ್ಮದರ್ಶಿ ಎನ್. ಐತ್ತಪ್ಪ ಸಪಲ್ಯರವರು ಮುತ್ತೈದೆಯರಿಗೆ ಬಳೆ, ರವಿಕೆ ಕಣ, ಹೂವು, ದಾರ ನೀಡುವುದರ ಮೂಲಕ ವಾಯನ ದಾನ ಮಾಡಿದರು.ಭಕ್ತಾದಿಗಳಿಗೆ ಸುಖ, ಶಾಂತಿ, ನೆಮ್ಮದಿ, ಸಕಲ ಐಶ್ವರ್ಯವನ್ನು ನೀಡಲಿ ಎಂದು ಹಾರೈಸಿದರು. ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಿತು.





















































error: Content is protected !!
Scroll to Top