ಕೇರಳಕ್ಕೆ ಸಾಗಿಸುತ್ತಿದ್ದ 20.80 ಲ.ರೂ. ವಶ : ಆರೋಪಿ ಬಂಧನ

ದಾಖಲೆ ಪತ್ರಗಳಿಲ್ಲದೆ ಮಂಗಳೂರಿನಿಂದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಅಪಾರ ಹಣ ಸಾಗಾಟ

ಮಂಗಳೂರು : ಮಂಗಳೂರಿನಿಂದ ಕೇರಳಕ್ಕೆ ಸೂಕ್ತ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 20.80 ಲ.ರೂ.ಯನ್ನು ಕೆಎಸ್‌ಆರ್‌ಟಿಸಿ ಬಸ್‌ ಪ್ರಯಾಣಿಕನಿಂದ ವಶಪಡಿಸಿಕೊಳ್ಳಲಾಗಿದೆ.

ಮಂಗಳೂರಿನಿಂದ ಕಾಸರಗೋಡಿಗೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಪ್ರಯಾಣಿಕನಿಂದ 20.80 ಲಕ್ಷ ರೂ. ನಗದು ಹಣವನ್ನು ಮಂಜೇಶ್ವರ ಅಬಕಾರಿ ದಳದ ಸಿಬಂದಿ ವಶಪಡಿಸಿಕೊಂಡಿದ್ದಾರೆ.





















































 
 

ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಮಂಗಳೂರಿನ ಜಯಶೀಲ ಪುಟ್ಟಣ್ಣ ಶೆಟ್ಟಿ(52) ಎಂಬಾತನನ್ನು ಬಂಧಿಸಲಾಗಿದೆ. ವಾಹನ ತಪಾಸಣೆ ಮಾಡುತ್ತಿದ್ದ ಅಬಕಾರಿ ಸಿಬ್ಬಂದಿಗಳು ಈತನ ಬ್ಯಾಗನ್ನು ಪರಿಶೀಲಿಸಿದಾಗ ನಗದು ಪತ್ತೆಯಾಗಿದೆ. ಮಂಗಳೂರಿನಿಂದ ಕಾಸರಗೋಡಿಗೆ ಹೋಗುತ್ತಿದ್ದ ಬಸ್ಸಿನಲ್ಲಿ ಹಣ ಸಾಗಾಟ ನಡೆದಿತ್ತು. ಈ ಸಂಬಂಧ ವಿಚಾರಣೆ ನಡೆಯುತ್ತಿದ್ದು, ಈ ಹಣ ಯಾರಿಂದ ಎಲ್ಲಿಗೆ ಸಾಗಾಟವಾಗುತ್ತಿತ್ತು ಎಂಬ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

error: Content is protected !!
Scroll to Top