ಪರೀಕ್ಷೆ ಬರೆಯಲು ತೆರಳಿದಾಕೆ ಪ್ರಿಯಕರನನ್ನು ಮದುವೆಯಾಗಿ ಪತ್ತೆ

ಅನ್ಯ ಮತದ ಮಶಾಕ್ ಜೊತೆ ಮದುವೆಯಾದ ಪಲ್ಲವಿ ಹೇಳಿದ್ದೇನು ಗೊತ್ತಾ?

ಕಲಬುರ್ಗಿ: ಬಿ.ಎಸ್ಸಿ. ಪರೀಕ್ಷೆ ಬರೆಯಲು ತೆರಳಿ ಬಳಿಕ ಮನೆಗೆ ಬಾರದೆ ಯುವತಿ ನಾಪತ್ತೆಯಾದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.

ನಾಪತ್ತೆಯಾದ ಯುವತಿ ಪಲ್ಲವಿ ತನ್ನ ಪ್ರಿಯಕರ ಮಶಾಕ್ ಎಂಬಾತನ ಜೊತೆಗೆ ಮದುವೆಯಾಗಿರುವುದಾಗಿ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ನೀಡಿದ್ದಾಳೆ.





















































 
 

ಗೊಬ್ಬರು ಬಿ. ಗ್ರಾಮದ ನಿವಾಸಿ ಯುವತಿ ಪರೀಕ್ಷೆಗೆ ಹೋಗುವುದಾಗಿ ‌ತೆರಳಿ ಬಳಿಕ ಮನೆಗೆ ಬಾರದೆ ನಾಪತ್ತೆಯಾದ ಬಗ್ಗೆ ಪ್ರಕರಣ ದಾಖಲಾಗಿತ್ತು. ಆಕೆಗೆ ಮಶಾಕ್ ಎಂಬ ಅನ್ಯ ಮತದ ಯುವಕನ ಜೊತೆ ಪ್ರೇಮವಿದ್ದು, ಇದೊಂದು ಲವ್ ಜಿಹಾದ್ ಎನ್ನುವ ಆರೋಪವನ್ನು ಸಹ ಹಿಂದೂ ಸಂಘಟನೆಗಳು ಮಾಡಿದ್ದವು.

ಇದೀಗ ಹಿಂದೂ ಸಂಘಟನೆಗಳ ಆರೋಪ ನಿಜವಾಗಿದಂತಿದೆ. ಯುವತಿ ಅನ್ಯ ಮತದ ಮಶಾಕ್ ಜೊತೆಗೆ ಮದುವೆಯಾಗಿದ್ದು, ತಾನು ಚೆನ್ನಾಗಿರುವುದಾಗಿ ಹೇಳಿದ್ದಾರೆ. ನಾನು ಎಲ್ಲೂ ಓಡಿ ಹೋಗಿಲ್ಲ. ನಾನು ಇಷ್ಟಪಟ್ಟವನ ಜೊತೆಗೆ ಮದುವೆಯಾಗಿದ್ದೇನೆ. ನಾನು ಇಲ್ಲಿಯ ವರೆಗೆ ಸುರಕ್ಷಿತಳಾಗಿದ್ದೇನೆ. ಇನ್ನು ಮುಂದಕ್ಕೆ ಏನಾದರೂ ಅಪಾಯ ಸಂಭವಿಸಿದಲ್ಲಿ ಅದಕ್ಕೆ ತನ್ನ ಕುಟುಂಬ ವರ್ಗ ಮತ್ತು ಹಿಂದೂ ಸಂಘಟನೆಗಳೇ ಕಾರಣ ಎಂದು ಆಕೆ ವಿಡಿಯೋದಲ್ಲಿ ಹೇಳಿದ್ದಾಳೆ.

ನಾನು ಸ್ವಇಚ್ಛೆಯಿಂದ ಮಶಾಕ್ ಜೊತೆ ಬಂದಿದ್ದೇನೆ. ಇದಕ್ಕಾಗಿ ಮಶಾಕ್ ಗೆಳೆಯರು, ಕುಟುಂಬಸ್ಥರಿಗೆ ತೊಂದರೆ ನೀಡಲಾಗುತ್ತಿದೆ. ಅವರಿಗೆ ತೊಂದರೆ ನೀಡಬೇಡಿ. ಇದರಲ್ಲಿ ಅವರ ಹಸ್ತಕ್ಷೇಪ ಇಲ್ಲ. ಇದು ನಮ್ಮಿಬ್ಬರ ನಿರ್ಧಾರ. ನಾನು ಮತ್ತು ಮಶಾಕ್ ಪ್ರೀತಿಯ ವಿಚಾರ ಹೆತ್ತವರಿಗೆ ಗೊತ್ತಾಗಿ ಅವರು ನನ್ನನ್ನು ಕಾಲೇಜಿಗೆ ಕಳುಹಿಸದೆ ಮನೆಯಲ್ಲೇ ಇರಿಸಿ ನನಗೆ ಕಿರುಕುಳ ನೀಡುತ್ತಿದ್ದರು. ಈ ಹಿಂಸೆ ತಾಳಲಾರದೆ ನಾನು ಮಶಾಕ್ ಜೊತೆ ಬಂದಿದ್ದೇನೆ. ಇದನ್ನು ಹಿಂದೂ ಸಂಘಟನೆಗಳು ಲವ್ ಜಿಹಾದ್ ಎಂದು ಬಿಂಬಿಸುತ್ತಿವೆ. ಇದನ್ನೇ ನನ್ನ ಪೋಷಕರ ತಲೆಗೂ ತುಂಬಲಾಗುತ್ತಿದೆ ಎಂದು ಪಲ್ಲವಿ ಆರೋಪಿಸಿದ್ದಾಳೆ.

error: Content is protected !!
Scroll to Top