ಬೀಡಿಕಾರ್ಮಿಕರ ಬೋನಸ್ ಸಾವಿರ ಬೀಡಿಗೆ ರೂ. 43.34

ಪುತ್ತೂರು: ಪ್ರತಿ ವರ್ಷದಂತೆ ಈ ವರ್ಷವೂ ಬೀಡಿಕಾರ್ಮಿಕರ ಬೋನಸ್, ರಜಾಸಂಬಳ, ಹಬ್ಬದ ರಜಾಸಂಬಳ ಒಟ್ಟಿಗೆ ಬಿಡುಗಡೆಯಾಗಿದ್ದು ಪ್ರತಿ ಸಾವಿರ ಬೀಡಿಗೆ ರೂ. 43.34 ರಂತೆ ಅಂದರೆ ಒಂದು ಲಕ್ಷ ಬೀಡಿಕಟ್ಟಿದವರಿಗೆತಲಾ ರೂ.4,334 ಬೋನಸ್ ಸಿಗಲಿದೆ ಎಂದು ಪುತ್ತೂರು ತಾಲೂಕು ಬೀಡಿಕೆಲಸಗಾರರ ಸಂಘದ ಅಧ್ಯಕ್ಷ, ನ್ಯಾಯವಾದಿ ಪಿ.ಕೆ.ಸತೀಶನ್, ಕಾರ್ಯದರ್ಶಿ ಬಿ.ಎಂ.ಭಟ್, ಖಜಾಂಜಿ ಈಶ್ವರಿ ಶಂಕರ್ ಮುಂಡೂರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.


ಅದಲ್ಲದೆ ಸರಕಾರ ನಿಗದಿ ಪಡಿಸಿದ ಹೊಸ ಕನಿಷ್ಟ ಕೂಲಿ ಪ್ರತಿ ಸಾವಿರ ಬೀಡಿಗೆ ರೂ. 391.92 ರಂತೆ ಸಿಗಬೇಕಿದ್ದು, ಅದರಲ್ಲಿ ಬೀಡಿ ಮಾಲಕರು ಈಗ ಸರಕಾರದ ಆದೇಶ ಉಲ್ಲಂಘಿಸಿ ಪ್ರತಿ ಸಾವಿರ ಬೀಡಿಗೆ ರೂ.284.88 ರಂತೆ ಮಾತ್ರಾ ಬಿಡುಗಡೆ ಮಾಡಿರೂ. 17.07 ಬಾಕಿ ಮಾಡಿರುತ್ತಾರೆ. ನಿಜವಾಗಿ ಸರಕಾರವೇ ಕಾರ್ಮಿಕರಿಗೆ ಈ ಬೆಲೆ ಏರಿಕೆ ನಡುವೆ ಪ್ರತಿ ಸಾವಿರಕ್ಕೆ ರೂ. 330.00 ಕ್ಕಿಂತ ಹೆಚ್ಚು ನೀಡಬೇಕಿದ್ದ ವೇತನವನ್ನು ರೂ. 301.92 ಕ್ಕೆ ಇಳಿಯುವಂತೆ ಮಾಡಿ ಹಿಮ್ಮುಖ ಆದೇಶ ಮಾಡಿತ್ತು. ಆದರೆ ಮಾಲಕರ ಪರವಾಗಿ ನಿಂತ ಸರಕಾರದಆದೇಶದ ವೇತನವನ್ನೂ ಬೀಡಿ ಮಾಲಕರು ನೀಡುತ್ತಿಲ್ಲಎಂಬುದನ್ನು ಸರಕಾರ ಮನಗಾಣಬೇಕು ಎಂದರು.
ಈಗ ಬೀಡಿ ಮಾಲಕರು ನೀಡಿದ ವೇತನದಲ್ಲಿ ಪ್ರತಿ ಸಾವಿರ ಬೀಡಿ ವೇತನದಲ್ಲಿ ಪಿ.ಎಫ್. ರೂ. 29 ಕಡಿತಗೊಂಡು ರೂ. 255.88 ರಂತೆ ಕಾರ್ಮಿಕರ ಹಸ್ತ ವೇತನ ನೀಡಬೇಕಿದೆ. ಈ ವೇತನವನ್ನು ಕೆಲವು ಬೀಡಿ ಕಂಪೆನಿಗಳು ಏ.1 2024 ರಿಂದ ಇನ್ನು ಕೆಲವು ಕಂಪೆನಿಗಳು ಜುಲೈ ೧ ರಿಂದ ನೀಡಿರುತ್ತಾರೆ ಎಂದು ಅವರು ಹೇಳಿಕೆಯ ಲ್ಲಿ ತಿಳಿಸಿರುತ್ತಾರೆ.

ಬೋನಸ್ ಮತ್ತು ವೇತನ ಸಮರ್ಪಕವಾಗಿ ಸಿಗದವರು 9448155980, 8792591538, 9448311240 ನಂಬ್ರಕ್ಕೆ ಕಾಲ್ ಮಾಡಬಹುದು.





















































 
 

error: Content is protected !!
Scroll to Top