ಡಾ. ಕೆ. ಸುಧಾಕರ್ ಹೆಸರು ಉಲ್ಲೇಖಿಸಿ ಆತ್ಮಹತ್ಯೆ ಮಾಡಿಕೊಂಡ ಕಾರ್ ಡ್ರೈವರ್

ಬೆಂಗಳೂರು: ಕಾರು ಚಾಲಕರೊಬ್ಬರು ಮಾಜಿ ಸಚಿವ ಬಿಜೆಪಿ ನಾಯಕ ಡಾ. ಕೆ.‌ ಸುಧಾಕರ್ ಹೆಸರನ್ನು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಮೃತರನ್ನು ಬಾಪೂಜಿನಗರದ ನಿವಾಸಿ ಬಾಬು (32) ಎಂದು ಗುರುತಿಸಲಾಗಿದೆ. ಅವರು ಜಿಲ್ಲಾ ಪಂಚಾಯತ್ ಸಿಇಒ ಅವರ ಕಾರು ಚಾಲಕನಾಗಿ ‌ಕೆಲಸ ಮಾಡುತ್ತಿದ್ದರು. ಅವರು ಜಿಲ್ಲಾ ಪಂಚಾಯತ್ ಸಭಾಂಗಣದ ಹಿಂಭಾಗದಲ್ಲಿರುವ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.

ಡೆತ್‌ನೋಟ್‌ನಲ್ಲಿ ನನ್ನ ಸಾವಿಗೆ ಡಾ.ಕೆ‌. ಸುಧಾಕರ್ ಕಾರಣ. ಹಾಗೆಯೇ ಚಿಕ್ಕಕಾಡಿಗಾನಹಳ್ಳಿಯ ನಾಗೇಶ್ ಎಂಬವರು ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ 25 ಲಕ್ಷ ರೂ. ಪಡೆದು ವಂಚಿಸಿದ್ದಾರೆ. ಹಾಗೆಯೇ, ಜಿ. ಪಂ. ಲೆಕ್ಕ ಸಹಾಯಕರ ವಿರುದ್ಧವೂ ಮೃತರು ಹಲವಾರು ಆರೋಪಗಳನ್ನು ಮಾಡಿದ್ದಾರೆ.





















































 
 

ಸ್ಥಳಕ್ಕೆ ಚಿಕ್ಕಬಳ್ಳಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

error: Content is protected !!
Scroll to Top