ರೈತರ ಅಭಿವೃದ್ಧಿ ವಿಷಯದಲ್ಲಿ ಯಾವುದೇ ಕಾರಣಕ್ಕೂ ರಾಜಿ ಇಲ್ಲ: ಪ್ರಧಾನಿ ಮೋದಿ

ನವದೆಹಲಿ: ಭಾರತದ ವಿರುದ್ಧ ಅಮೆರಿಕಾ ಸುಂಕ ಯುದ್ಧ ಹೇರುವುದಾಗಿ ಹೇಳಿದ್ದು, ಈ ನಡುವೆ ಪ್ರಧಾನಿ ಮೋದಿ ಅವರು ರೈತರಿಗೆ ಸಂಬಂಧಿಸಿದ ಹಾಗೆ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ.

ಭಾರತ ರೈತರ ಹಿತಾಸಕ್ತಿ ಕಾಪಾಡಲು ಯಾವುದೇ ವೈಯಕ್ತಿಕ ನಷ್ಟಕ್ಕೂ ಸಿದ್ಧ ಎನ್ನುವ ಮೂಲಕ ಭಾರತಕ್ಕೆ ಸುಂಕ ಭಯ ಹುಟ್ಟಿಸಲು ‌ಮುಂದಾದ ಅಮೆರಿಕಾದ ಟ್ರಂಪ್‌ಗೆ ಸವಾಲೆಸೆದಿದ್ದಾರೆ. ರೈತರ ಹಿತಾಸಕ್ತಿಗಳನ್ನು ಕಾಪಾಡುವುದು ನಮ್ಮ ಮುಖ್ಯ ಗುರಿ. ಈ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂದು ಅವರು ತಿಳಿಸಿದ್ದಾರೆ.

ಸರ್ಕಾರ ರೈತರ ಆದಾಯ ಹೆಚ್ಚು ಮಾಡಲು, ಕೃಷಿ ಮೇಲಿನ ಖರ್ಚು ಕಡಿಮೆ ಮಾಡಲು ನಿರಂತರ ಕೆಲಸ ಮಾಡುತ್ತಿದೆ. ರೈತರ ಹಿತಾಸಕ್ತಿಯೇ ‌ನಮ್ಮ ಆದ್ಯತೆ. ಇದಕ್ಕೆ ವೈಯಕ್ತಿಕವಾಗಿ ಎಷ್ಟು ದೊಡ್ಡ ಪ್ರಮಾಣದ ಬೆಲೆ ಕಟ್ಟುವುದಕ್ಕೂ ನಾನು ಸಿದ್ಧ ಎಂದಿದ್ದಾರೆ.





















































 
 
error: Content is protected !!
Scroll to Top