ಧರ್ಮಸ್ಥಳ: ಈಗಾಗಲೇ ದೇಶದೆಲ್ಲೆಡೆ ಸದ್ದು ಮಾಡಿರುವ ಧರ್ಮಸ್ಥಳ ಪ್ರಕರಣದಲ್ಲಿ ಅನಾಮಿಕ ದೂರುದಾರ ಗುರುತಿ ಮಾಡಿದ ಸ್ಥಳಗಳಲ್ಲಿ SIT ಶೋಧ ಕಾರ್ಯ ನಡೆಸುತ್ತಿದೆ. ಅದೇ ಪರಿಸರದಲ್ಲಿ ಇಂದು ಸಂಜೆ ಅಹಿತಕರ ಘಟನೆಯೊಂದು ಸದ್ದು ಮಾಡಿದೆ.
ಸೌಜನ್ಯ ಪರ ಎಂದು ಹೇಳಿಕೊಂಡು ವಿಡಿಯೋಗಳನ್ನು ಮಾಡುತ್ತಿದ್ದ ಮೂವರು ಯೂಟ್ಯೂಬರ್ಸ್ ಮೇಲೆ ನೇತ್ರಾವತಿ ನದಿ ತೀರದ ಪಾಂಗಳ ಪರಿಸರದಲ್ಲಿ ಹಲ್ಲೆ ನಡೆದಿದೆ.
ಯೂಟ್ಯೂಬರ್ಸ್ ಹಾಗು ಮತ್ತೊಂದು ಗುಂಪಿನ ನಡುವೆ ಮಾತಿನ ಚಕಮಕಿ ನಡೆದು, ಹಲ್ಲೆಯ ವರೆಗೆ ತಲುಪಿದೆ. ಅಶಾಂತಿ ಸೃಷ್ಟಿಯಾಗುವ ಪರಿಸರ ನಿರ್ಮಾಣವಾದ ಹಿನ್ನೆಲೆಯಲ್ಲಿ ಪೊಲೀಸರು ಲಘು ಲಾಠಿ ಚಾರ್ಜ್ ನಡೆಸಿದ ಘಟನೆಯೂ ನಡೆದಿದೆ. ಆದರೂ ನೆರೆದ ಜನರ ಸಂಖ್ಯೆ ಕಡಿಮೆಯಾಗದ ಕಾರಣ ಹೆಚ್ಚುವರಿ ಪೊಲೀಸರನ್ನು ಸ್ಥಳಕ್ಕೆ ಕರೆಸಿದ್ದು, ಬಿಗಿ ಬಂದೋಬಸ್ತ್ ಮಾಡಲಾಗಿದೆ.
























