ಬೆಂಗಳೂರು: ವಾಟ್ಸಾಪ್ ಆ್ಯಪ್ಲಿಕೇಶನ್ 98 ಲಕ್ಷ ಭಾರತೀಯ ಬಳಕೆದಾರರ ಖಾತೆಗಳನ್ನು ತನ್ನ ಫ್ಲಾಟ್ಫಾರ್ಮ್ನಿಂದ ನಿಷೇಧಿಸಿದೆ.
ಈ ವಿಚಾರವನ್ನು ಮೆಟಾ ಬಹಿರಂಗ ಮಾಡಿದ್ದು, ವದಂತಿಗಳನ್ನು ಹಬ್ಬುವುದು, ವೇದಿಕೆಯನ್ನು ದುರುಪಯೋಗ ಮಾಡಿಕೊಳ್ಳುವುದು ಇತ್ಯಾದಿ ಕಾರಣಗಳಿಗಾಗಿ ಈ ಕ್ರಮ ಕೈಗೊಂಡಿರುವುದಾಗಿದೆ.
ಈ ಹಿಂದೆಯೂ ವಾಟ್ಸಾಪ್ ಇಂತಹ ಕ್ರಮಗಳನ್ನು ಕೈಗೊಂಡಿದ್ದು, ಪ್ರತಿ ತಿಂಗಳು ಸಹ ವಾಟ್ಸಾಪ್ ಇಂತಹ ಕ್ರಮಗಳನ್ನು ತೆಗೆದುಕೊಳ್ಳುತ್ತಲೇ ಇರುತ್ತದೆ.
ಬಳಕೆದಾರರ ಸುರಕ್ಷತೆಯ ದೃಷ್ಟಿಯಿಂದ ವಾಟ್ಸಾಪ್ ಈ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ.
























