ಸರ್ಕಾರದ ಜೊತೆ ಕೈಜೋಡಿಸಿ: ಸಾರಿಗೆ‌ ನೌಕರರಿಗೆ ಡಿ ಕೆ ಶಿವಕುಮಾರ್ ಮನವಿ

ಬೆಂಗಳೂರು: ಸಾರಿಗೆ ನೌಕರರ ಬೇಡಿಕೆ ನ್ಯಾಯಯುತವಾದದ್ದೇ. ಆದರೆ ಸರ್ಕಾರದ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ನೌಕರರಿಗೆ ನೆರವಾಗುವ ಮನಸ್ಥಿತಿಯನ್ನು ಸಿ ಎಂ, ಸಾರಿಗೆ ಸಚಿವರು ಹೊಂದಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಸಾರಿಗೆ ನೌಕರರ ಮುಷ್ಕರದಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಇದನ್ನು ನೌಕರರು ಅರಿತು ಸರ್ಕಾರದ ಜೊತೆಗೆ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಮುಷ್ಕರವಿದ್ದರೂ ಕೆಲವು ನೌಕರರು ಕರ್ತವ್ಯ ನಿರ್ವಹಿಸಿದ್ದಾರೆ. ಅವರಿಗೆ ಅಭಿನಂದನೆಗಳು. ಸಾರ್ವಜನಿಕರ ಜೀವನ ಮುಖ್ಯ‌. ಹಾಗಾಗಿ ಸರ್ಕಾರದ ಜೊತೆ ಕೈ ಜೋಡಿಸಿ. ಸರ್ಕಾರ ನಿಮಗೆ ಕೈಲಾಗುವ ಎಲ್ಲಾ ಸಹಾಯ ಮಾಡುತ್ತದೆ‌. ಆದ್ದರಿಂದ ಹಠ ಬಿಟ್ಟು ಕರ್ತವ್ಯಕ್ಕೆ ಹಾಜರಾಗುವಂತೆ ಅವರು ಮನವಿ ಮಾಡಿದ್ದಾರೆ.





















































 
 
error: Content is protected !!
Scroll to Top