ಚೆನೈ: ಕನ್ನಡ ಭಾಷೆಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಕೆಲ ಸಮಯದ ಹಿಂದೆ ವಿವಾದ ಸೃಷ್ಟಿಸಿಕೊಂಡಿದ್ದ ನಟ ಕಮಲ್ ಹಾಸನ್ ಈಗ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.
ಕಮಲ್ ಸನಾತನ ಧರ್ಮದ ಬಗ್ಗೆ ನಾಲಿಗೆ ಬಿಟ್ಟಿದ್ದು, ಶಿಕ್ಷಣ ಸನಾತನ ಧರ್ಮ ಮತ್ತು ಸರ್ವಾಧಿಕಾರದ ಸಂಕೋಲೆಗಳನ್ನು ತುಂಡು ಮಾಡಬಲ್ಲ ಏಕೈಕ ಅಸ್ತ್ರ ಎಂದು ಹೇಳಿದ್ದಾರೆ. ಸನಾತನ ಧರ್ಮವನ್ನು ಸಂಕೋಲೆಗೆ ಹೋಲಿಕೆ ಮಾಡಿ ಮತ್ತೊಮ್ಮೆ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಕಮಲ್ ಹಾಸನ್ ಹೇಳಿಕೆಯನ್ನು ತಮಿಳುನಾಡಿನ ಬಿಜೆಪಿ ಖಂಡಿಸಿದ್ದು, ಹಿಂದೆ ಭಾಷೆಗೆ ಸಂಬಂಧಿಸಿದ ಹಾಗೆ ಸಮಾಜವನ್ನು ಒಡೆಯಲು ಪ್ರಯತ್ನ ನಡೆಸಿದ್ದರು. ಈಗ ಧರ್ಮದ ಹೆಸರಲ್ಲಿ ಸಮಾಜವನ್ನು ಒಡೆಯಲು ಯತ್ನಿಸುತ್ತಿದ್ದಾರೆ ಎಂದು ಟೀಕಿಸಿದೆ.
























