ಧರ್ಮಸ್ಥಳ: ನೂರಾರು ಶವಗಳನ್ನು ಹೂತಿರುವುದಾಗಿ ಹೇಳಲಾದ ಧರ್ಮಸ್ಥಳ ಪ್ರಕರಣದಲ್ಲಿ SIT ಅಧಿಕಾರಿಗಳು ಹೊಸ ಸ್ಥಳದಲ್ಲಿ ಉತ್ಖನನ ಕಾರ್ಯ ನಡೆಸಿದ್ದು, ಇಲ್ಲಿ ಶವದ ಅವಶೇಷಗಳು ದೊರಕಿದೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಅನಾಮಿಕ ದೂರುದಾರ ಗುರುತು ಮಾಡಿದ್ದ 13 ಸ್ಥಳಗಳ ಪೈಕಿ 10 ಸ್ಥಳಗಳ ಶೋಧ ಕಾರ್ಯ ನಡೆಸಿದ್ದು ಇವುಗಳ ಪೈಕಿ ಒಂದರಲ್ಲಿ ಶವದ ಅವಶೇಷ ಸಿಕ್ಕಿತ್ತು. ಇಂದು 11 ನೇ ಪಾಯಿಂಟ್‌ನಲ್ಲಿ ಉತ್ಖನನ ನಡೆಸುವ ಬದಲು ಹೊಸ ಸ್ಥಳದಲ್ಲಿ ಶೋಧ ಕಾರ್ಯ ನಡೆಸಲಾಗಿತ್ತು.
ಹೊಸ ಸ್ಥಳದಲ್ಲಿ ಕೆಲವೊಂದು ಅವಶೇಷಗಳು ಪತ್ತೆಯಾಗಿರುವುದಾಗಿ ಮಾಹಿತಿ ಇದ್ದು, ವಿಧಿವಿಜ್ಞಾನ ತಜ್ಞರು ಅದನ್ನು ಸಂಗ್ರಹಿಸಿ, ಪರೀಕ್ಷೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
























