ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ

ಈ ಬಾರಿ ಸಂಘದ ಸದಸ್ಯರಿಗೆ ಶೇ. 15 ಡಿಬಿಡೆಂಡ್ ಘೋಷಣೆ 

ಪುತ್ತೂರು: ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಭಾನುವಾರ ತೆಂಕಿಲ ಒಕ್ಕಲಿಗ ಗೌಡ ಸಮುದಾಯಭವನದಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಸಭೆಯಅಧ್ಯಕ್ಷತೆ ವಹಿಸಿ ಮಾತನಾಡಿ, ಮೊಳಹಳ್ಳಿ ಶಿವರಾಯರಂತಹ ಹಿರಿಯ ಸಹಕಾರಿ ಧುರೀಣರ ದೂರದೃಷ್ಟಿಯಿಂದ ಪುತ್ತೂರಿನಲ್ಲಿ ಇಂದು ಸಾಕಷ್ಟು ಸಹಕಾರ ಸಂಸ್ಥೆಗಳು ಬೆಳೆದು ನಿಂತಿವೆ. ಈ ಬಾರಿ ಸಂಘದ ಸದಸ್ಯರಿಗೆ ಶೇ. 15 ಡಿಬಿಡೆಂಡ್ ಘೋಷಣೆ ಮಾಡಿದರು.





















































 
 

ಡಿ.ವಿ ಸದಾನಂದ ಗೌಡ ಶಾಸಕರಾಗಿದ್ದಾಗ ಅವರ ಸಲಹೆಯಂತೆ ಒಕ್ಕಲಿಗ ಗೌಡ ಸೇವಾ ಸಂಘ (ರಿ) ಪುತ್ತೂರು, ನೂತನ ಬೈಲಾದೊಂದಿಗೆ ನೋಂದಣಿಗೊಂಡು ಶ್ರೀ ಇಡ್ಯಡ್ಕ ಮೋಹನ ಗೌಡರ ಸಾರಥ್ಯದಲ್ಲಿ 20 ಮಂದಿ ಪ್ರವರ್ತಕರ ತಂಡ, ಶ್ರೀ ಕುರುಂಜಿ ವೆಂಕಟರಮಣ ಗೌಡ, -ಶ್ರೀ ಗುಂಡ್ಯ ಅಣ್ಣಯ್ಯ ಗೌಡ, ಶ್ರೀ ಕೆಮ್ಮಾರ ಬಾಲಕೃಷ್ಣ ಗೌಡ, ಶ್ರೀ ಸಿ.ಪಿ ಜಯರಾಮ ಗೌಡ ಮುಂತಾದ ಹಿರಿಯರ ಮಾರ್ಗದರ್ಶನ ಮತ್ತು ಪ್ರೋತ್ಸಾಹದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘದ ಪ್ರಾಯೋಜಕತ್ವದಲ್ಲಿ 2002 ರಲ್ಲಿ ಪರಮಪೂಜ್ಯ ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರ ಆಶೀರ್ವಚನದೊಂದಿಗೆ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ನಿ. ಪುತ್ತೂರು, ಶ್ರೀ ಮಹಾಲಿಂಗೇಶ್ವರ ದೇವಳದ ಸಭಾಭವನದಲ್ಲಿ ಶ್ರೀ ಜಗನ್ನಾಥ ಬೊಮ್ಮೆಟ್ಟಿಯವರ ಅಧ್ಯಕ್ಷತೆಯಲ್ಲಿ ಪ್ರಾರಂಭಗೊಂಡಿತ್ತು. ತದನಂತರ 2009ರಲ್ಲಿ ಕಡಬ, 2011ರಲ್ಲಿ ಉಪ್ಪಿನಂಗಡಿ, 2014ರಲ್ಲಿ ನೆಲ್ಯಾಡಿ, 2015ರಲ್ಲಿ ಕುಂಬ್ರ, , 2020 ರಲ್ಲಿ ಆಲಂಕಾರು,2021 ರಲ್ಲಿ ಪುತ್ತೂರು ಎಸ್ ಎಂಟಿ, 2022 ರಲ್ಲಿ ಕಾಣಿಯೂರು, 2023 ರಲ್ಲಿ ಬೆಳ್ಳಾರೆ ಹಾಗೂ 2024 ರಲ್ಲಿ ವಿಟ್ಲ ಶಾಖೆಯನ್ನು ತೆರೆಯಲಾಯಿತು. ಪ್ರಸ್ತುತ 10 ಶಾಖೆಗಳು ಸಕ್ರೀಯವಾಗಿ ವ್ಯವಹಾರವನ್ನು ನಡೆಸುತ್ತಾ ಇದ್ದು, ಸುಮಾರು 7,693ಕ್ಕೂ ಮಿಕ್ಕಿ ಸದಸ್ಯರನ್ನು ಹೊಂದಿದ್ದು, ಸುಮಾರು 4.42 ಕೋಟಿ ಪಾಲುಬಂಡವಾಳ ಹೊಂದಿರುತ್ತದೆ.

ಇತ್ತೀಚಿಗೆ ಎಲ್ಲಾ ಶಾಖೆಗಳನ್ನು ಆಧುನೀಕರಣಗೊಳಿಸಲಾಗಿದ್ದು, ಕಳೆದ ಹತ್ತು ವರ್ಷಗಳಿಂದ ಲೆಕ್ಕಪರಿಶೋಧನೆಯಲ್ಲಿ ಸತತ ‘ಎ’ ತರಗತಿ ಶ್ರೇಣಿಯನ್ನು ಪಡೆಯುತ್ತಾ ಇದೆ. ವ್ಯವಹಾರಗಳು ಇನ್ನಷ್ಟು ಪರಿಪೂರ್ಣವಾಗಲು ಎಲ್ಲಾ ಶಾಖೆಗಳಿಗೆ ಸ್ಥಳೀಯ ಪ್ರಮುಖರ ಸಲಹಾ ಸಮಿತಿ ರಚನೆ ಮಾಡಲಾಗಿದೆ. ಈ ರೀತಿ ಕಳೆದ ಆರ್ಥಿಕ ವರ್ಷದಲ್ಲಿ ಸುಮಾರು ರೂ. 744ಕೋಟಿ ಮಿಕ್ಕಿ ವ್ಯವಹಾರ ಮಾಡಲಾಗಿದ್ದು, ರೂ. 2,01,50,812-33 ನಿವ್ವಳ ಲಾಭ ಪಡೆಯಲಾಗಿದೆ. 2023-24ನೇ ಸಾಲಿನ ದ. ಕ. ಜಿ. ಕೇಂದ್ರ ಸಹಕಾರಿ ಬ್ಯಾಂಕಿನ ಮಹಾಸಭೆಯಲ್ಲಿ ನಮ್ಮ ಸಂಘದ ಪ್ರಗತಿಯನ್ನು ಕಂಡು 3ನೇ ಬಾರಿಗೆ ಸಾಧನಾ ಪ್ರಶಸ್ತಿ ಮತ್ತು ಅತ್ಯುತ್ತಮ ಸಾಧನೆಗಾಗಿ ಚಿನ್ನದ ಪದಕ ನೀಡಿ ಗೌರವಿಸಿರುವುದು ಸಂತೋಷದ ವಿಚಾರ ಎಂದು ತಿಳಿಸಿದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಯು.ಪಿ.ರಾಮಕೃಷ್ಣ, ನಿರ್ದೇಶಕರಾದ ಮೋಹನ ಗೌಡ ಇಡ್ಯಡ್ಕ, ರಾಮಕೃಷ್ಣ ಗೌಡ ಕರ್ಮಲ, ಜಿನ್ನಪ್ಪ ಗೌಡ ಮಳುವೇಲು, ಸುದರ್ಶನ ಗೌಡ ಕೋಡಿಂಬಾಳ, ಸಂಜೀವ ಗೌಡ ಕೆ., ಸತೀಶ್ ಪಾಂಬಾರು, ಪ್ರವೀಣ್ ಕೂಂಟ್ಯಾನ, ಲೋಕೇಶ್ ಚಾಕೋಟೆ, ಸುಪ್ರೀತಾ ರವಿಚಂದ್ರ, ತೇಜಸ್ವಿನಿ ಶೇಖರ ಗೌಡ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ ಕೆ. ಉಪಸ್ಥಿತರಿದ್ದರು. ಸಮಾರಂಭದಲ್ಲಿ ಗ್ರಾಹಕರು, ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ಯು.ಪಿ.ರಾಮಕೃಷ್ಣ ಸ್ವಾಗತಿಸಿದರು. ನಿರ್ದೇಶಕ ಸತೀಶ್ ಪಾಂಬಾರು ವಂದಿಸಿದರು.

error: Content is protected !!
Scroll to Top