ಖ್ಯಾತ ಹಾಸ್ಯನಟ ಮದನ್‌ ಬಾಬು ನಿಧನ

ಕಮಲಹಾಸನ್‌, ರಜನಿಕಾಂತ್‌ರಂಥ ಸ್ಟಾರ್‌ ನಟರೊಂದಿಗೆ ಅಭಿನಯಿಸಿದ್ದ ಕಲಾವಿದ

ಚೆನ್ನೈ: ತಮಿಳು ಚಿತ್ರರಂಗದ ಜನಪ್ರಿಯ ಹಾಸ್ಯನಟ ಮದನ್ ಬಾಬ್ (71) ಶನಿವಾರ ರಾತ್ರಿ ನಿಧನ ಹೊಂದಿದ್ದಾರೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಟ ಶನಿವಾರ ಸಂಜೆ ತನ್ನ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. 1984ರಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ಮದನ್‌ ಬಾಬ್‌, ಕಮಲಹಾಸನ್, ರಜನಿಕಾಂತ್, ಅಜಿತ್ ಕುಮಾರ್‌, ಸೂರ್ಯ ಮತ್ತು ವಿಜಯ್ ಅವರಂತಹ ಸ್ಟಾರ್‌ ನಟರೊಂದಿಗೆ ಅಭಿನಯಿಸಿದ್ದಾರೆ. ಹಾಸ್ಯ, ಖಳನಾಯಕ ಸೇರಿದಂತೆ ಪ್ರಮುಖ ಪಾತ್ರಗಳಲ್ಲಿ ನಟಿಸಿ ರಂಜಿಸಿದ್ದರು.

ಸುದೀರ್ಘ ವೃತ್ತಿಜೀವನದಲ್ಲಿ, ಅವರು 150ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ತಮಿಳು ಮಾತ್ರವಲ್ಲದೆ ಮಲಯಾಳಂ, ಹಿಂದಿ ಮತ್ತು ತೆಲುಗು ಚಿತ್ರಗಳಲ್ಲಿಯೂ ನಟಿಸಿದ್ದಾರೆ. ತಮಿಳಿನ ತೆನಾಲಿ ಚಿತ್ರದಲ್ಲಿ ಡೈಮಂಡ್ ಬಾಬು, ಫ್ರೆಂಡ್ಸ್ ಚಿತ್ರದಲ್ಲಿ ಮ್ಯಾನೇಜರ್ ಸುಂದರೇಶನ್‌ ಪಾತ್ರಗಳು ಪ್ರೇಕ್ಷಕರನ್ನ ನಕ್ಕು ನಲಿಸಿದ್ದವು.





















































 
 
error: Content is protected !!
Scroll to Top