ಧರ್ಮಸ್ಥಳ: ದೇಶವನ್ನೇ ತನ್ನತ್ತ ಸೆಳೆದ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಗುರುತು ಮಾಡಲಾದ 9 ನೇ ಪಾಯಿಂಟ್‌ನಲ್ಲಿ ಉತ್ಖನನ ನಡೆಸಲಾಗಿದ್ದು, ಇದರಲ್ಲಿ ಕಳೇಬರದ ಯಾವುದೇ ಕುರುಹು ಪತ್ತೆಯಾಗಿಲ್ಲ.
SIT ಅಧಿಕಾರಿಗಳು ಗುರುತಿಸಲಾದ ಪ್ರದೇಶದಲ್ಲಿ ಪೌರಕಾರ್ಮಿಕರ ಮೂಲಕ 4 ಅಡಿಗಳಷ್ಟು ಅಗೆಸಿದ್ದು, ಬಳಿಕ ಜೆಸಿಬಿ ಬಳಸಿ ಸ್ಥಳದಲ್ಲಿ ಮತ್ತು ಸುತ್ತಮುತ್ತಲಲ್ಲಿ ಪರಿಶೀಲಿಸಿದರೂ ಯಾವುದೇ ಸಾಕ್ಷಿ ಪತ್ತೆಯಾಗಿಲ್ಲ.
ಈ ಸ್ಥಳದಲ್ಲಿ ಹಲವು ಹೆಣಗಳನ್ನು ಹೂತಿದ್ದೇನೆ. ಕುರುಹುಗಳು ಸಿಗಲೇ ಬೇಕು ಎಂದು ಈ ಹಿಂದೆ ದೂರುದಾರ ಹೇಳಿದ್ದು, ಆದ್ದರಿಂದ ಈ ಸ್ಥಳ ಹೆಚ್ಚು ಮಹತ್ವ ಪಡೆದಿತ್ತು ಎನ್ನಲಾಗಿದೆ.
























