ಯುಪಿಐ ಬಳಕೆಗೆ ಹೊಸ ರೂಲ್ಸ್

ನವದೆಹಲಿ: UPI ಬಳಕೆಯನ್ನು ಮತ್ತಷ್ಟು ಸುಲಭಗೊಳಿಸುವ ನಿಟ್ಟಿನಲ್ಲಿ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳನ್ನು ತರಲಾಗಿದೆ.

ಬ್ಯಾಂಕ್ ಖಾತೆಯಲ್ಲಿ ಬಾಕಿ ಉಳಿದ ಮೊತ್ತ ಪರಿಶೀಲನೆಗೆ ಮಿತಿ ಹಾಕಲಾಗಿದ್ದು, ನಿತ್ಯ 50 ಬಾರಿ ಮಾತ್ರವೇ ಪರಿಶೀಲನೆ ಮಾಡಬಹುದಾಗಿದೆ. ಆಫ್ ಪೀಕ್ ಅವರ್ ಅಥವಾ ಕಡಿಮೆ ವಹಿವಾಟಿನ ವೇಳೆ ಸ್ವಯಂ ಪಾವತಿಗಳು ನಡೆಯಲಿವೆ.

ಯುಪಿಐ ಪಾವತಿ ವಿಫಲ ಅಥವಾ ಸ್ಥಗಿತವಾದ ಸಂದರ್ಭದಲ್ಲಿ ಈ ಪ್ರಕ್ರಿಯೆ ಯಾವ ಹಂತದಲ್ಲಿದೆ ಎಂದು ತಿಳಿಯಲು ಮೂರು ಮಿತಿಗಳನ್ನು ನೀಡಲಾಗಿದ್ದು, ಒಂದು ಮಿತಿ ರಿಂದ ಇನ್ನೊಂದಕ್ಕೆ 90 ನಿಮಿಷ ಕಾಯಬೇಕಿದೆ. ಹಣ ಪಾವತಿಗೂ ಮೊದಲು ಖಾತೆ ಹೊಂದಿದವರ ಹೆಸರು ಖಾತ್ರಿ ಮಾಡಲಾಗುತ್ತದೆ. ಜೊತೆಗೆ ಪಾವತಿಯ ಬಳಿಕ ಪಾವತಿ ಮಾಡಿದವರ ಖಾತೆಯಲ್ಲಿನ ಬಾಕಿ ಮೊತ್ತ ತೋರಿಸುವಂತೆ ನಿಯಮಗಳ ಬದಲಾವಣೆ ಮಾಡಲಾಗಿದೆ.





















































 
 
error: Content is protected !!
Scroll to Top