ಧರ್ಮಸ್ಥಳ ಪ್ರಕರಣ: ನಾಲ್ಕನೇ ಪಾಯಿಂಟಿನಲ್ಲೂ ‌ಸಿಕ್ಕಿಲ್ಲ ಯಾವುದೇ ಕುರುಹು

ನಾಲ್ಕನೇ ಪಾಯಿಂಟ್‌ಗೆ ಡಾ. ಮೊಹಂತಿ ಭೇಟಿ, ಪರಿಶೀಲನೆ

ಧರ್ಮಸ್ಥಳ: ನೂರಾರು ಹೆಣಗಳನ್ನು ಹೂಳಲಾಗಿದೆ ಎಂಬ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ SIT ಅಧಿಕಾರಿಗಳು ನಾಲ್ಕನೇ ಪಾಯಿಂಟ್ ಬಳಿಯೂ ಕಳೇಬರಕ್ಕಾಗಿ ಹುಡುಕಾಟ ನಡೆಸಿದ್ದು, ಇದರಲ್ಲಿಯೂ ಯಾವುದೇ ಕುರುಹು ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.

ಈಗಾಗಲೇ ಮೂರು ಪಾಯಿಂಟ್‌ಗಳಲ್ಲಿ ಕಾರ್ಮಿಕರು, ಜೆಸಿಬಿ ‌ಮತ್ತು ಶ್ವಾನ ದಳದ ಮೂಲಕವೂ ಕಳೇಬರದ ಕುರುಹುಗಳಿಗಾಗಿ ಹುಡುಕಾಟ ನಡೆಸಲಾಗಿತ್ತು. ಆದರೆ ಇದರಲ್ಲಿ ಹೂತಿಡಲಾಗಿದೆ ಎನ್ನಲಾದ ಯಾವುದೇ ಶವದ ಕುರುಹು ಸಹ ಪತ್ತೆಯಾಗಿಲ್ಲ. ಇದೀಗ ನಾಲ್ಕನೇ ಪಾಯಿಂಟ್ ಅಗೆದು ಪರಿಶೀಲನೆ ನಡೆಸಲಾಗಿದ್ದು ಈ ಸ್ಥಳದಲ್ಲೂ ‌ಶವ ಹೂಳಿರುವುದಕ್ಕೆ ಸಂಬಂಧಿಸಿದ ಹಾಗೆ ಯಾವುದೇ ಕುರುಹುಗಳು ಲಭ್ಯವಾಗಿಲ್ಲ.





















































 
 

ದೂರುದಾರ ಗುರುತಿಸಿರುವ ‌ನಾಲ್ಕನೇ ಪಾಯಿಂಟ್‌ಗೆ SIT ಮುಖ್ಯಸ್ಥ ಡಾ. ಪ್ರಣವ್ ಮೊಹಂತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

error: Content is protected !!
Scroll to Top