ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ಲಾಸ್ಟಿಕ್ ನಿಷೇಧ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ಲಾಸ್ಟಿಕ್ ನಿಷೇಧಕ್ಕೆ ಮುಂದಾಗಿದ್ದು, ವಿಶೇಷ ಪ್ರಸಾದ ಮತ್ತು ಸರ್ವ ಸೇವೆ ಪ್ರಸಾದಕ್ಕೆ ಉಚಿತ ಬಟ್ಟೆ ಚೀಲ ನೀಡಲು ಮುಂದಾಗಿದೆ.

ಇತರ ಪ್ರಸಾದಗಳ ವಿತರಣೆಗೆ ರೂ. 5 ಕ್ಕೆ ಭಕ್ತರಿಗೆ ಬಟ್ಟೆ ಚೀಲಗಳನ್ನು ಒದಗಿಸಲಾಗುತ್ತದೆ ಎಂದು ದೇಗುಲದ ವ್ಯವಸ್ಥಾಪನಾ ಸಮಿತಿ ಮಾಹಿತಿ ನೀಡಿದೆ.

ರಾಜ್ಯದ ದೇವಾಲಯಗಳಲ್ಲಿ ಅಕ್ಟೋಬರ್ 15, 2025 ರಿಂದ ಯಾವುದೇ ರೀತಿಯ ಪ್ಲಾಸ್ಟಿಕ್ ವಸ್ತುಗಳ ಬಳಕೆ ಮಾಡದಂತೆ, ಪ್ಲಾಸ್ಟಿಕ್ ನಿಷೇಧಿಸುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ. ಈ ಸುತ್ತೋಲೆಯ ಅನ್ವಯ ಪುತ್ತೂರು ದೇವಾಲಯದಲ್ಲೂ ಪ್ಲಾಸ್ಟಿಕ್ ಚೀಲಗಳ ಬದಲು ಬಟ್ಟೆ ಚೀಲಗಳ ಬಳಕೆಗೆ ಮುಂದಾಗಿರುವುದಾಗಿದೆ.





















































 
 
error: Content is protected !!
Scroll to Top