ಧರ್ಮಸ್ಥಳ: ನೂರಾರು ಹೆಣಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ದೂರುದಾರ ಗುರುತಿಸಿದ್ದ ಪ್ರದೇಶದಲ್ಲಿ SIT ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ಇಲ್ಲಿಯೂ ಯಾವುದೇ ಕಳೇಬರದ ಕುರುಹು ಇನ್ನೂ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.
ಅಧಿಕಾರಿಗಳು ಗುರುತು ಮಾಡಲ್ಪಟ್ಟ ಮೂರನೇ ಸ್ಥಳದಲ್ಲಿಯೂ ಕಳೇಬರದ ಅವಶೇಷಗಳಿವೆಯೇ ಎಂದು ತಿಳಿಯಲು ಕಾರ್ಯಾಚರಣೆ ಆರಂಭಿಸಿದ್ದು ಇದರಲ್ಲಿಯೂ ಈ ವರೆಗೆ ಯಾವ ಅವಶೇಷವೂ ಪತ್ತೆಯಾಗಿಲ್ಲ ಎಂದು ಹೇಳಲಾಗುತ್ತಿದೆ. ಕಾರ್ಯಾಚರಣೆ ಇನ್ನೂ ಚಾಲ್ತಿಯಲ್ಲಿರುವುದಾಗಿ ತಿಳಿದು ಬಂದಿದೆ.
ನಿನ್ನೆ ಒಂದನೇ ಗುರುತಿನಲ್ಲಿ ಉತ್ಖನನ ನಡೆಸಿದ್ದು, ಅದರಲ್ಲಿಯೂ ಯಾವುದೇ ಶವದ ಕಳೇಬರದ ಕುರುಹುಗಳು ಪತ್ತೆಯಾಗಿರಲಿಲ್ಲ.
























