ಮಂಗಳೂರು: ಇಲಿಪಾಷಾಣವನ್ನು ಔಷಧ ಎಂದು ಭಾವಿಸಿ ಸೇವಿಸಿದ ಹೆಡ್‌ಕಾನ್ಸ್ಟೆಬಲ್ ಒಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ.
ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸುರತ್ಕಲ್ ಬಳಿಯ ಚೆಲ್ಯಾರು ನಿವಾಸಿ ಹರೇಕಳ ಮೂಲದ ಮಂಜುನಾಥ್ ಹೆಗ್ಡೆ(44) ಎಂಬವರೇ ಮೃತ ದುರ್ದೈವಿ.
ಅನಾರೋಗ್ಯದ ಹಿನ್ನೆಲೆಯಲ್ಲಿ ಆಯುರ್ವೇದಿಕ್ ಔಷಧಿ ಮಾಡುತ್ತಿದ್ದರು. ಇಲಿಪಾಷಾಣವನ್ನು ಔಷಧ ಎಂದು ತಪ್ಪಾಗಿ ತಿಳಿದು ಸೇವಿಸಿದ ಪರಿಣಾಮ ಸಾವು ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಗಂಭೀರವಾಗಿ ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಚಿದ್ದಾರೆ.
ಮೃತರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
























