ಬೆಂಗಳೂರು: ಅತ್ಯಾಚಾರ ಮತ್ತು ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಬಂಧನದಲ್ಲಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಕಳೆದ 14 ತಿಂಗಳುಗಳಿಂದ ನ್ಯಾಯಾಂಗ ಬಂಧನದಲ್ಲಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನೀಡಬೇಕಿದ್ದ ತೀರ್ಪನ್ನು ಆಗಸ್ಟ್ 1 ಕ್ಕೆ ಮುಂದೂಡಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ನೀಡಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ 26 ಸಾಕ್ಷಿಗಳನ್ನು ಕೋರ್ಟ್ ವಿಚಾರಣೆ ನಡೆಸಿದ್ದು ತೀರ್ಪನ್ನು ಆಗಸ್ಟ್ 1 ಕ್ಕೆ ಕಾಯ್ದಿರಿಸಿದೆ.
ಈ ಸಂಬಂಧ ಪ್ರಜ್ವಲ್ ಕೋರ್ಟಿಗೆ ಹಾಜರಾಗಿದ್ದು, ಅವರ ರಾಜಕೀಯ ಭವಿಷ್ಯದ ದೃಷ್ಟಿಯಿಂದಲೂ ಈ ತೀರ್ಪು ಮಹತ್ವ ಪಡೆಯಲಿದೆ. ಎರಡೂ ಕಡೆಯ ವಕೀಲರ ಬಳಿ ಕೆಲವು ಸ್ಪಷ್ಟನೆಗಳನ್ನು ಕೋರ್ಟ್ ಪಡೆದಿದ್ದು, ಆ ಬಳಿಕ ಈ ಪ್ರಕರಣದ ತೀರ್ಪನ್ನು ಆಗಸ್ಟ್ 1 ಕ್ಕೆ ಮುಂದೂಡಿ ತೀರ್ಪಿತ್ತಿದೆ.
























