ರಷ್ಯಾದಲ್ಲಿ 8.8 ತೀವ್ರತೆಯ ಪ್ರಬಲ ಭೂಕಂಪ : ಹಲವು ದೇಶಗಳಿಗೆ ಸುನಾಮಿ ಎಚ್ಚರಿಕೆ

ಜಪಾನ್‌ ಕರಾವಳಿ ತೀರಕ್ಕೆ ಅಪ್ಪಳಿಸಿದ 3 ಮೀಟರ್‌ ಎತ್ತರ ಅಲೆಗಳು

ಮಾಸ್ಕೊ: ರಷ್ಯಾದ ಕರಾವಳಿ ಪ್ರದೇಶದಲ್ಲಿ ಇಂದು ನಸುಕಿನ ಹೊತ್ತು 8.8 ತೀವ್ರತೆಯ ಭಾರಿ ಭೂಕಂಪ ಸಂಭವಿಸಿದ್ದು, ಇದರ ಪರಿಣಾಮವಾಗಿ ಅಮೆರಿಕದ ಅಲಾಸ್ಕಾದ ಭಾಗಗಳು, ಜಪಾನ್‌ ಹಾಗೂ ಶಾಂತಸಾಗರದ ದಡದಲ್ಲಿರುವ ಇತರ ದೇಶಗಳಿಗೆ ಸುನಾಮಿ ಎಚ್ಚರಿಕೆ ನೀಡಲಾಗಿದೆ.

ರಷ್ಯಾದ ಪೂರ್ವ ಕಮ್ಚಟ್ಕಾ ದ್ವೀಪದ ಪೆನಿನ್ಸುಲಾದಲ್ಲಿರುವ ಪೆಟ್ರೋಪಾವ್ಲೋವ್ಸಕ್‌ನಿಂದ ಸುಮಾರು 136 ಕಿಲೋಮೀಟರ್ ದೂರದಲ್ಲಿ ಭೂಕಂಪ ಸಂಭವಿಸಿದೆ. 19 ಕಿಮೀ ಆಳದಲ್ಲಿ ಕಂಪನದ ಕೇಂದ್ರ ಬಿಂದು ಪತ್ತೆಯಾಗಿದ್ದು, 4 ಮೀಟರ್ (13 ಅಡಿ)ವರೆಗಿನ ಸುನಾಮಿ ಅಲೆ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಲಾಗಿದೆ.





















































 
 

ಅಮೆರಿಕದ ಅಧಿಕಾರಿಗಳು ಅಲಾಸ್ಕಾದ ಭಾಗಗಳಿಗೆ ಸುನಾಮಿ ಎಚ್ಚರಿಕೆ ನೀಡಿದ್ದಾರೆ. ಈ ಬೆನ್ನಲ್ಲೇ ಜಪಾನ್‌ನ ಹವಾಮಾನ ಇಲಾಖೆ ಸುನಾಮಿ ಎಚ್ಚರಿಕೆ ನೀಡಿದೆ. ಕಮ್ಚಟ್ಕಾದ ಕೆಲವು ಭಾಗಗಳಲ್ಲಿ 3-4 ಮೀಟರ್ (10-13 ಅಡಿ) ಎತ್ತರದ ಸುನಾಮಿ ಅಪ್ಪಳಿಸಿರುವುದಾಗಿ ಪ್ರಾದೇಶಿಕ ಸಚಿವ ಸೆರ್ಗೆಯ್ ಲೆಬೆಡೆವ್ ತಿಳಿಸಿದ್ದಾರೆ.

ಅಮೆರಿಕ ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ ಭೂಕಂಪದ ಕೇಂದ್ರಬಿಂದು 19.3 ಕಿಮೀ (12 ಮೈಲುಗಳು) ಆಳದಲ್ಲಿ ಪತ್ತೆಯಾಗಿದೆ. ಕಟ್ಟಡಗಳು ಉರುಳಿಬಿದ್ದ ಘಟನೆಗಳು ಸಂಭವಿಸಿವೆ. ಆದರೆ ಸಾವುನೋವಿನ ಮಾಹಿತಿ ಇನ್ನೋ ದೊರಕಿಲ್ಲ. ಒಂದರಿಂದ ಮೂರು ಮೀಟರ್‌ ಎತ್ತರದ ಅಲೆಗಳು ಜಪಾನ್ ಕರಾವಳಿಗೆ ಅಪ್ಪಳಿಳಿಸಿವೆ. ರಷ್ಯಾದಲ್ಲಿ ಸಂಭವಿಸಿದ ಭೂಕಂಪದ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

error: Content is protected !!
Scroll to Top