ಪಂಜ: ಲಯನ್ಸ್ ಕ್ಲಬ್ ಪಂಜ ವತಿಯಿಂದ ಲಯನ್ಸ್ ಭವನ ಪಂಜದಲ್ಲಿ ಕಾರ್ಗಿಲ್ ದಿವಸ್ ಆಚರಣೆ ನಡೆಯಿತು.
ಭಾರತೀಯ ಸೇನೆಯ ಮಾಜಿ ಸೈನಿಕ ರಾಧಾಕೃಷ್ಣ ಕುಳ ಅವರನ್ನೂ ಮಾಜಿ ಪ್ರಾಂತೀಯ ಅಧ್ಯಕ್ಷ ಲ. ಮಾಧವ ಗೌಡ ಜಾಕೆ ಸನ್ಮಾನಿಸಿ ಅಭಿನಂದಿಸಿದರು.
ವಲಯಾಧ್ಯಕ್ಷ ಲ. ದಿಲೀಪ್ ಬಾಬ್ಲುಬೆಟ್ಟು ಅಥಿತಿಯಾಗಿ ಭಾಗವಹಿಸಿ ಕಾರ್ಯಕ್ರಮದ ಮಹತ್ವವನ್ನು ವಿವರಿಸಿದರು.
ಹಿರಿಯ ಸದಸ್ಯ ಲ. ಶ್ರೇಯಾಂಸ್ ಕುಮಾರ್ ಶೆಟ್ಟಿಮೂಲೆ, ನಿಕಟಪೂರ್ವ ಅಧ್ಯಕ್ಷ ಲ. ಶಶಿಧರ ಪಳಂಗಾಯ, ಕೋಶಾಧಿಕಾರಿ ಲ. ವಾಸುದೇವ ಮೇಲ್ಪಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲ. ನಾಗೇಶ್ ಕಿನ್ನಿಕುಮೇರಿ ಸ್ವಾಗತಿಸಿದರು. ಕಾರ್ಯದರ್ಶಿ ಲ.ಕರುಣಾಕರ ಎಣ್ಣೆಮಜಲು ವಂದಿಸಿದರು.
























