ಕಳೇಬರ ಸಿಗದೆ ಇಂದಿನ ಕಾರ್ಯಾಚರಣೆ ಮುಗಿಸಿದ ಅಧಿಕಾರಿಗಳು
ಧರ್ಮಸ್ಥಳ: ಇಡೀ ದೇಶವನ್ನೇ ತನ್ನತ್ತ ಸೆಳೆದಿರುವ ಧರ್ಮಸ್ಥಳ ಪ್ರಕರಣದ ದೂರುದಾರ ಗುರುತಿಸಿರುವ ಒಂದನೇ ಸ್ಥಳಗಳಲ್ಲಿ ಹಿಟಾಚಿ ಬಳಸಿ SIT ಅಧಿಕಾರಿಗಳು ಗುಂಡಿ ತೋಡಿ ಹುಡುಕಿದರೂ ಹೂತಿಟ್ಟ ಶವದ ಕಳೇಬರದ ಕುರುಹು ಸಹ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ಡಾಗ್ ಸ್ಕ್ವಾಡ್ ಆಗಮಿಸಿದೆ.
ಕಾರ್ಮಿಕರು ನಾಲ್ಕು ಅಡಿ ಗುಂಡಿ ತೋಡಿದ್ದು, ಶವದ ಕಳೇಬರ ಸಿಗದ ಹಿನ್ನೆಲೆ ಹಿಟಾಚಿ ಬಳಸಿ ಮತ್ತಷ್ಟು ಆಳದ ವರೆಗೆ ಗುಂಡಿ ತೋಡಿ ಶವ ಹೂತ ಕುರುಹಿಗೆ ಹುಡುಕಾಟ ನಡೆಸಲಾಗಿದೆ. ಸುಮಾರು ಒಂದು ತಾಸುಗಳ ವರೆಗೆ ಈ ಕೆಲಸ ನಡೆದಿದ್ದು, ಇದರಿಂದ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಯಾವ ಸಾಕ್ಷಿಯೂ ಲಭ್ಯವಾಗಿಲ್ಲ.
ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಶ್ವಾನ ದಳವನ್ನು ಕರೆಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಇಂದು ಯಾವುದೇ ಕಳೇಬರ ಸಿಗದೆ ಎಸ್‌ಐಟಿ ಅಧಿಕಾರಿಗಳು ಮರಳಿದ್ದಾಗಿ ತಿಳಿದು ಬಂದಿದೆ.
ಎಲ್ಲರ ಚಿತ್ತ ಈ ಸ್ಥಳದಲ್ಲಿ ಶವದ ಕಳೇಬರ ಸಿಕ್ಕಿ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಏನಾದರೂ ಮಾಹಿತಿ ಸಿಗುವುದೇ ಎಂಬತ್ತ ನೆಟ್ಟಿದೆ.
























