ಧರ್ಮಸ್ಥಳ ಪ್ರಕರಣ: ಶವಗಳ ಅವಶೇಷ ಹೊರತೆಗೆಯುವ ಕಾರ್ಯಾಚರಣೆಯಲ್ಲಿ SIT ತಂಡ

ಧರ್ಮಸ್ಥಳ: ಹಲವಾರು ಹೆಣಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ SIT ತಂಡ ದೂರುದಾರನ ಜೊತೆಗೆ ಧರ್ಮಸ್ಥಳ ಕಾಡಿನಲ್ಲಿ ಹೆಣಗಳ ಕಳೇಬರ ಹೊರತೆಗೆಯುವ ಪ್ರಕ್ರಿಯೆ ಆರಂಭ ಮಾಡಿದೆ.

ಪ್ರಕರಣಕ್ಕೆ ‌ಸಂಬಂಧಿಸಿದ ಹಾಗೆ ಎಸ್‌ಐಟಿ ಅಧಿಕಾರಿಗಳು ಇಂದು ಮುಂಜಾನೆಯೇ ಕಚೇರಿಗೆ ಆಗಮಿಸಿದ್ದು, ಈ ಕಾರ್ಯದಲ್ಲಿ ವೈದ್ಯರ ತಂಡ ಸಹ ಜೊತೆಯಾಗಿದೆ.

ಈಗಾಗಲೇ‌‌ ದೂರುದಾರ ‌ವ್ಯಕ್ತಿ ಗುರುತಿಸಿರುವ ‌ಸ್ಥಳಗಳಲ್ಲಿ ಮೃತದೇಹದ ಅವಶೇಷಗಳನ್ನು ಹೊರತೆಗೆವ ಕೆಲಸಕ್ಕೆ ತಯಾರಿ ನಡೆಯುತ್ತಿದೆ ಎಂದು ತಿಳಿದು ಬಂದಿದೆ. ಸಹಾಯಕ ಆಯುಕ್ತರ ಸಮ್ಮುಖದಲ್ಲೇ ಈ ಕಾರ್ಯಾಚರಣೆ ನಡೆಸಲಾಗುತ್ತಿದೆ.





















































 
 

ಸ್ಥಳದಲ್ಲಿ ಪೊಲೀಸರ ಸರ್ಪಗಾವಲು ಇದೆ.

error: Content is protected !!
Scroll to Top