ಮಂಗಳೂರು: ಸತತ ಏಳು ದಿನಗಳ ಕಾಲ ಭರತನಾಟ್ಯ ಮಾಡಿ ಮಂಗಳೂರಿನ ರೆಮೋನಾ ಪಿರೇರಾ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ದಾಖಲೆ ನಿರ್ಮಿಸಿದ್ದಾರೆ.
ಜುಲೈ 28 ರಂದು ಸಂತ ಅಲೋಶಿಯಸ್ ವಿ.ವಿ.ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ತಂಡ ರೆಮೋನಾ ಅವರ ದಾಖಲೆಯನ್ನು ಅಧಿಕೃತವಾಗಿ ಘೋಷಿಸಿ, ಪ್ರಶಸ್ತಿ ಪ್ರಧಾನಿಸಿದೆ.
ಸಂತ ಅಲೋಶಿಯಸ್ ಕಾಲೇಜಿನ ರಾಬರ್ಟ್ ಸಿಕ್ವೇರಾ ಹಾಲ್‌ನಲ್ಲಿ ಜುಲೈ 21 ರಂದು ರೆಮೋನಾ ಭರತನಾಟ್ಯ ಆರಂಭಿಸಿದ್ದು ರಾತ್ರಿ ಹಗಲೆನ್ನದೆ ನಿರಂತರವಾಗಿ ಜುಲೈ 28 ರ ವರೆಗೆ 170 ಗಂಟೆಗಳ ಕಾಲ ನೃತ್ಯ ಮಾಡುವ ಮೂಲಕ ದಾಖಲೆ ಬರೆದಿದ್ದಾರೆ.
ಪ್ರತಿ ಮೂರು ಗಂಟೆಗಳಿಗೊಮ್ಮೆ 15 ನಿಮಿಷ ಮಾತ್ರವೇ ಬಿಡುವಿಗೆ ಅವಕಾಶ ಇದ್ದು, ರೆಮೋನಾ ಅವರ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
























