ಸರಿಯಾದ ಸಮಯದಲ್ಲಿ ಸಿಎಂ ಪಟ್ಟಕ್ಕೆ ಕಲ್ಲು ಹೊಡೆದ ಖರ್ಗೆ : ಅಶೋಕ್‌ ವ್ಯಂಗ್ಯ

ಅಕ್ಟೋಬರ್‌ನಲ್ಲಿ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಖಚಿತ

ಬೆಂಗಳೂರು: ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಳ್ಳಲು ಮಲ್ಲಿಕಾರ್ಜುನ ಖರ್ಗೆ ಪ್ರಯತ್ನಪಡುತ್ತಿದ್ದು, ಸರಿಯಾದ ಸಮಯಕ್ಕೆ ಕಲ್ಲು ಹೊಡೆದಿದ್ದಾರೆಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ವ್ಯಂಗ್ಯವಾಡಿದ್ದಾರೆ.

1999ರಲ್ಲಿ ಸಿಎಂ ಸ್ಥಾನ ಕೈತಪ್ಪಿದ್ದಕ್ಕೆ ಖರ್ಗೆ ಬೇಸರ ವ್ಯಕ್ತಪಡಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅಶೋಕ್‌, ಖರ್ಗೆ ಸರಿಯಾದ ಸಮಯಕ್ಕೆ ಕಲ್ಲು ಹೊಡೆದಿದ್ದಾರೆ. ಸಿಎಂ ಕುರ್ಚಿಯಲ್ಲಿ ಖರ್ಗೆ ಕುಳಿತುಕೊಳ್ಳಲು ಪ್ರಯತ್ನಪಡುತ್ತಿದ್ದಾರೆ. ಎಸ್‌.ಎಂ. ಕೃಷ್ಣ ಅವರು ಸತ್ತ ಮೇಲೆ ಅವರ ಹೆಸರು ಹೇಳುತ್ತಾರೆ. ಎಸ್‌.ಎಂ. ಕೃಷ್ಣ ಸತ್ತ ಮೇಲೆ ಖರ್ಗೆ ಟೀಕೆ ಮಾಡುತ್ತಿದ್ದಾರೆ. ಈ ಮೂಲಕ ಕೃಷ್ಣಗೆ ಅಪಮಾನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.





















































 
 

ಸಿದ್ದರಾಮಯ್ಯ ಇಲ್ಲದಿದ್ದರೆ ಖರ್ಗೆ ಸಹಜವಾಗಿ ಸಿಎಂ ಆಗುತ್ತಿದ್ದರು. ಈಗ ಖರ್ಗೆ ಸರಿಯಾದ ಸಮಯಕ್ಕೆ ಕಲ್ಲು ಹೊಡೆದಿದ್ದಾರೆ. ಅಕ್ಟೋಬರ್‌ನಲ್ಲಿ ಸಿಎಂ ಬದಲಾವಣೆ ಆಗುವುದು ನಿಜ. ಸಿಎಂ ಸ್ಥಾನಕ್ಕಾಗಿ ವರ ಕೊಡುವ ದೇವರ ಬಳಿ ಡಿಕೆಶಿ ಹೋಗುತ್ತಿದ್ದಾರೆ. ಡಿಕೆಗೆ ಕಂಟಕ ಇರೋದು ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಹೋದವರಿಂದ ಎಂದು ತಿಳಿಸಿದರು.

error: Content is protected !!
Scroll to Top