ಪುಂಜಾಲಕಟ್ಟೆಯಲ್ಲಿ ದಿಶಾ ತರಬೇತಿ ಸಂಪನ್ನ

ಬೆಳ್ತಂಗಡಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ ಇಲ್ಲಿನ ಪ್ರಥಮ ವರ್ಷದ ಪದವಿ ತರಗತಿಯ ವಿದ್ಯಾರ್ಥಿಗಳಿಗಾಗಿ ‘ದಿಶಾ’ ತರಬೇತಿ ಕಾರ್ಯಕ್ರಮ ಜುಲೈ 28ರಂದು ನಡೆಯಿತು. ಕಾಲೇಜಿನ ಆಂತರಿಕ ಗುಣಮಟ್ಟ ಖಾತ್ರಿ ಘಟಕ (Internal Quality Assurance Cell) ಮತ್ತು ವಿದ್ಯಾರ್ಥಿ ಕ್ಷೇಮಪಾಲನ ಕಚೇರಿ (Students’ Welfare Office) ಇವುಗಳ ಜಂಟಿ ಆಶ್ರಯದಲ್ಲಿ ‘ Small steps towards big dreams start today’ ಎಂಬ ಧ್ಯೇಯವಾಕ್ಯದೊಂದಿಗೆ ಕಾರ್ಯಕ್ರಮ ಏರ್ಪಾಡಾಗಿತ್ತು.

ರಾಷ್ಟ್ರೀಯ ತರಬೇತುದಾರ ಮತ್ತು ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಪುತ್ತೂರುನ ನಿರ್ದೇಶಕ ಸೀತಾರಾಮ ಕೇವಳ ಅವರು ವಿದ್ಯಾರ್ಥಿಗಳೊಡಗೂಡಿ ಗಿಡಕ್ಕೆ ನೀರೆರೆದು ಕಾರ್ಯಾಗಾರವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ತಂದೆ – ತಾಯಿ – ಗುರುಗಳ ನಿರೀಕ್ಷೆಗಳನ್ನು ಸಾಕಾರಗೊಳಿಸಲು ವಿದ್ಯಾರ್ಥಿಗಳು ಪಣತೊಡಬೇಕು ಎಂದು ಹೇಳಿದರು. ವಿವಿಧ ಆಕರ್ಷಕ ಚಟುವಟಿಕೆಗಳ ಮೂಲಕ ಅವರು ಜೀವನ ಮೌಲ್ಯಗಳನ್ನು ಮನಮುಟ್ಟುವಂತೆ ತಿಳಿಹೇಳಿದರು.

ಕಾಲೇಜಿನ ಪ್ರಾಂಶುಪಾಲ ಪ್ರೊ. ಮಾಧವ ಅವರು ಅಧ್ಯಕ್ಷ ಸ್ಥಾನದಿಂದ ಮಾತನಾಡಿ ಇಂದು ಶಿಕ್ಷಣವೇ ಶಕ್ತಿಯಾಗಿದೆ ಎಂದು ಹೇಳಿ ಎಲ್ಲಾ ಲಭ್ಯ ಮೂಲಗಳಿಂದ ಜ್ಞಾನ ಸಂಗ್ರಹಿಸಿ ಸಶಕ್ತರಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.





















































 
 

ಆಂತರಿಕ ಗುಣಮಟ್ಟ ಖಾತ್ರಿ ಘಟಕದ ಸಂಯೋಜಕಿ ಪ್ರೊ. ಪರಮೇಶ್ವರಿ ಎನ್. ನಿರೂಪಿಸಿದ ಕಾರ್ಯಕ್ರಮದಲ್ಲಿ ಆಂತರಿಕ ಗುಣಮಟ್ಟ ಖಾತ್ರಿ ಘಟಕದ ಇನ್ನೋರ್ವ ಸಂಯೋಜಕಿ ಡಾ. ಅವಿತಾ ಮರಿಯಾ ಕ್ವಾಡ್ರಸ್ ಸ್ವಾಗತಿಸಿ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಡಾ. ವೈಶಾಲಿ ಯು. ವಂದಿಸಿದರು.
ತೃತೀಯ ಬಿ .ಎ. ತರಗತಿಯ ನಿಶಾ ಮತ್ತು ಬಳಗದವರು ದೇವರನ್ನು ಪ್ರಾರ್ಥಿಸಿದರು.

error: Content is protected !!
Scroll to Top