ಧರ್ಮಸ್ಥಳ: ನೂರಾರು ಶವಗಳನ್ನು ಹೂತಿಡಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ತನಿಖೆಯನ್ನು ತೀವ್ರಗೊಳಿಸಿರುವ SIT ತಂಡ, ದೂರುದಾರ ವ್ಯಕ್ತಿಯ ಜೊತೆಗೆ ನೇತ್ರಾವತಿ ಸ್ನಾನಘಟ್ಟದ ಪ್ರದೇಶದಲ್ಲಿ ಮಹಜರು ಪ್ರಕ್ರಿಯೆ ಆರಂಭ ಮಾಡಿದೆ.
ಈ ಪ್ರಕ್ರಿಯೆ ನಡೆಸುವುದಕ್ಕೂ ಮೊದಲು ತನಿಖಾಧಿಕಾರಿಗಳಾದ ಅನುಚೇತ್, ಜಿತೇಂದ್ರ ಕುಮಾರ್, ಸಿ.ಎ. ಸೈಮನ್ ಅವರು ಬೆಳ್ತಂಗಡಿ ಠಾಣೆಗೂ ಭೇಟಿ ನೀಡಿದ್ದು ದೂರುದಾರನ ಜೊತೆಗೆ ಕೆಲ ಸಮಯ ಮಾತುಕತೆ ನಡೆಸಿದ್ದಾರೆ.
ಆ ಬಳಿಕ ಇಂದು ಮದ್ಯಾಹ್ನ ಆತನನ್ನು ಭಾರೀ ಭದ್ರತೆಯಲ್ಲಿ ಸ್ಥಳಕ್ಕೆ ಕರೆತಂದು ಮಹಜರು ಪ್ರಕ್ರಿಯೆ ಆರಂಭಿಸಲಾಗಿದೆ. ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಅಧಿಕಾರಿಗಳ ತಂಡ ನಿರಾಕರಿಸಿದೆ.
























