ನಾಯಿ ಕಡಿತ, ರೇಬಿಸ್ ಕುರಿತು ಆತಂಕ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ನಾಯಿ ಕಚ್ಚಿ ರೇಬಿಸ್‌ಗೆ ತುತ್ತಾಗಿರುವ ‌ವಿಷಯಕ್ಕೆ ಸಂಬಂಧಿಸಿದ ಹಾಗೆ ಮಾಧ್ಯಮಗಳ ವರದಿಗಳಿಂದ ತಿಳಿದು ಬಂದಿದ್ದು, ಈ ಸಂಬಂಧ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ.

ಈ ವಿಷಯವನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿರುವ ನ್ಯಾಯಾಲಯ ‘ಆತಂಕಕಾರಿ ‌ಮತ್ತು ಗಾಬರಿಗೊಳಿಸುವಂತಹ ವಿಷಯ’ ಎಂದು ಹೇಳಿದೆ. ನವದೆಹಲಿ ಮತ್ತು ಹೊರ ವಲಯದಲ್ಲಿ ನಾಯಿ ಕಡಿತಕ್ಕೆ ಸಂಬಂಧಿಸಿದ ಹಾಗೆ ನೂರಾರು ಪ್ರಕರಣಗಳು ವರದಿಯಾಗುತ್ತಿವೆ. ಇದು ಅಂತಿಮವಾಗಿ ರೇಬಿಸ್‌ಗೆ ಕಾರಣವಾಗುತ್ತಿದೆ. ಮಕ್ಕಳು, ವೃದ್ಧರು ಸಹ ಈ ಭಯಾನಕ ಕಾಯಿಲೆಗೆ ತುತ್ತಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದೆ.

ಈ‌ ಸಂಬಂಧ ಸೂಕ್ತ ಆದೇಶಗಳಿಗಾಗಿ ಭಾರತದ ಮುಖ್ಯ ನ್ಯಾಯಾಧೀಶರ ಮುಂದೆ ಸುದ್ದಿ ವರದಿಯ ಜೊತೆಗೆ ಈ ಆದೇಶ ನೀಡಲಿ ಎಂದು ಈ ಪ್ರಕರಣವನ್ನು ಸ್ವಯಂ ಪ್ರೇರಿತವಾಗಿ ಕೈಗೆತ್ತಿಕೊಂಡ ನ್ಯಾಯ ಪೀಠ ಹೇಳಿದೆ.





















































 
 
error: Content is protected !!
Scroll to Top