ಮಂಗಳೂರು: ಧರ್ಮಸ್ಥಳದಲ್ಲಿ ಶವ ಹೂತಿಡಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ತನಿಖೆ ನಡೆಸಲು ರಾಜ್ಯ ಸರ್ಕಾರ SIT ಮುಖ್ಯಸ್ಥರನ್ನಾಗಿ ಪ್ರಣವ್ ಮೊಹಂತಿ ಅವರನ್ನು ಆಯ್ಕೆ ಮಾಡಿದ್ದು, ಅವರು ಆ ತನಿಖೆಗೆ ಸೂಕ್ತ ವ್ಯಕ್ತಿ ಅಲ್ಲ ಎಂದು ಮಾಜಿ ಡಿವೈಎಸ್‌ಪಿ ಅನುಪಮಾ ಶೆಣೈ ಆಕ್ಷೇಪ ಸಲ್ಲಿಸಿದ್ದಾರೆ.
ಈ ಸಂಬಂಧ ಮಂಗಳೂರಿನಲ್ಲಿ ಮಾತನಾಡಿದ ಅವರು ನರಹತ್ಯೆ, ಅತ್ಯಾಚಾರ ಕುರಿತಾದ ತನಿಖೆಗೆ ಮೊಹಂತಿ ಸೂಕ್ತ ವ್ಯಕ್ತಿ ಅಲ್ಲ. ಮೊಹಂತಿ ಅವರನ್ನು ನೇಮಕ ಮಾಡಿರುವುದರಲ್ಲಿ ಕೆ. ಎ. ಜಾರ್ಜ್ ಕೈವಾಡ ಇದೆ ಎಂಬ ಮಾತುಗಳು ಕೇಳುತ್ತಿವೆ. ಈ ನೇಮಕಾತಿ ಪೊಲೀಸರ ನೈತಿಕ ಬಲಕ್ಕೆ ಪೆಟ್ಟು ನೀಡಿದೆ ಎಂದು ಹೇಳಿದ್ದಾರೆ.
ಈ ಹಿಂದೆ ಡಿವೈಎಸ್‌ಪಿ ಗಣಪತಿ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಜಾರ್ಜ್ ಜೊತೆಗೆ ಐಪಿಎಸ್ ಅಧಿಕಾರಿ ಎಂ. ಎಂ. ಪ್ರಸಾದ್ ಮತ್ತು ಪ್ರಣವ್ ಮೊಹಂತಿ ಅವರ ಹೆಸರುಗಳೂ ಕೇಳಿ ಬಂದಿತ್ತು. ಈ ಕಾರಣದಿಂದ ಮೊಹಂತಿ ಬದಲಾಗಿ ದಯಾನಂದ ಅಥವಾ ಡಿಜಿಪಿ ಡಾ. ಕೆ. ರಾಮಚಂದ್ರ ರಾವ್ ಅವರನ್ನು ತನಿಖಾ ತಂಡದ ಉಸ್ತುವಾರಿಯನ್ನಾಗಿ ನೇಮಿಸುವಂತೆಯೂ ಆಗ್ರಹಿಸಿದರು.
























