ಪುತ್ತೂರು: ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ಮತ್ತು ಕೆವಿಜಿ ವೈದ್ಯಕೀಯ ಮಹಾವಿದ್ಯಾಲಯಗಳ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಡೆದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ವನ್ನು ಕೆವಿಜಿ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಚಂದ್ರಶೇಖರ ಪೇರಾಲ್ ಉದ್ಘಾಟಿಸಿದರು.
ಸುಳ್ಯದಲ್ಲಿ ಕೆವಿಜಿ – ಪುತ್ತೂರಿನಲ್ಲಿ ಎವಿಜಿ
ಉದ್ಘಾಟಕರು ಮಾತನಾಡಿ ಸುಳ್ಯದ ಬೆಳವಣಿಗೆಯಲ್ಲಿ ಡಾ. ಕುರುಂಜಿ ವೆಂಕಟ್ರಮಣ ಗೌಡರು ಮಾಡಿದ ಶೈಕ್ಷಣಿಕ ಮತ್ತು ಸಾಮಾಜಿಕ ಸಾಧನೆಯಿಂದಾಗಿ ಇಂದು ಇಂತಹ ಉಚಿತ ವೈದ್ಯಕೀಯ ತಪಾಸಣಾ ಶಿಬಿರಗಳು ನಡೆಯಲು ಸಾಧ್ಯವಾಗಿದೆ ಎಂದರು. ಕುರುಂಜಿಯವರ ಕೈಂಕರ್ಯವನ್ನು ಅವರ ಸುಪುತ್ರರು ಮುಂದುವರಿಸಿಕೊಂಡು ಹೋಗುತ್ತಿರುವುದು ಅಭಿನಂದನಾರ್ಹ ಎಂದ ಅವರು ಸುಳ್ಯದಲ್ಲಿ ಕೆವಿಜಿ ಇದ್ದಂತೆ ಪುತ್ತೂರಿನಲ್ಲಿ ಎವಿಜಿ ಪ್ರಸಿದ್ಧಿ ಪಡೆಯಲಿ ಎಂದರು.

ಹಸಿರು ಪರಿಸರ – ಸುಂದರ
ಕೆವಿಜಿ ಆಯುರ್ವೇದಿಕ್ ಕಾಲೇಜಿನ ವೈದ್ಯ ಡಾ. ಪ್ರಮೋದ್ ಪೂಂಬಾಡಿ ಮಾತನಾಡಿ ಆಹಾರ-ವಿಹಾರಗಳ ನಿಯಮಿತ ಪಾಲನೆ ಮಾಡಿದಲ್ಲಿ ರೋಗಮುಕ್ತರಾಗಿರಬಹುದು ಎಂದು ಹೇಳಿ ಆಯುರ್ವೇದದ ಪ್ರಾಮುಖ್ಯತೆಯನ್ನು ವಿಶದಪಡಿಸಿದರು. ಪೇಟೆಯ ಮಧ್ಯದಲ್ಲೂ ಹಸಿರ ಪರಿಸರದಲ್ಲಿ, ಪ್ರಶಾಂತ ವಾತಾವರಣದಲ್ಲಿ ಎದ್ದು ನಿಂತಿರುವ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ಒಂದು ಉತ್ತಮ ಮಾದರಿ ಸಂಸ್ಥೆಯಾಗಿದೆ ಎಂದು ಶ್ಲಾಘಿಸಿದರು.

ಏನಿದ್ದರೇನು ಆರೋಗ್ಯವಿಲ್ಲದಿದ್ದರೆ
ಸಭಾಧ್ಯಕ್ಷತೆ ವಹಿಸಿದ್ದ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನ ಅಧ್ಯಕ್ಷ ಕಳುವಾಜೆ ವೆಂಕಟ್ರಮಣ ಗೌಡರು ಮಾತನಾಡಿ ಎಲ್ಲಾ ಇದ್ದೂ ಆರೋಗ್ಯವಿಲ್ಲದಿದ್ದರೆ ಜೀವನಕ್ಕೆ ಅರ್ಥವಿಲ್ಲವಾದ್ದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಕೆವಿಜಿ ಆಯುರ್ವೇದಿಕ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ವಿಜಯಲಕ್ಷ್ಮೀ, ನಮ್ಮ ಕ್ಲಿನಿಕ್’ನ ವೈದ್ಯ ಡಾ. ಮಲ್ಲಿಕಾರ್ಜುನ ತುದಿಯಡ್ಕ, ನಗರಸಭಾ ಉಪಾಧ್ಯಕ್ಷ ಶೀನಪ್ಪ ಕುಲಾಲ್, ನಗರಸಭಾ ಸದಸ್ಯೆ ಶ್ರೀಮತಿ ಗೌರಿ ಬನ್ನೂರು, ಮಾಜಿ ನಗರಸಭಾ ಸದಸ್ಯ ಮತ್ತು ಸತ್ಯನಾರಾಯಣ ಪೂಜಾ ಕಟ್ಟೆಯ ಅಧ್ಯಕ್ಷ ಉದಯ ಕುಮಾರ್, ಬನ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶಿವಕುಮಾರ್, ವಿಷ್ಣು ಯುವಕ ಮಂಡಲದ ಅಧ್ಯಕ್ಷ ದಯಾನಂದ ಗೌಡ, ಸ್ಪೂರ್ತಿ ಯುವಕ ಮಂಡಲದ ಸಂಚಾಲಕ ದಿನೇಶ್ ಸಾಲ್ಯಾನ್, ಆನೆಮಜಲು ಫ್ರೆಂಡ್ಸ್ ಸೇವಾ ಸಮಿತಿ ಅಧ್ಯಕ್ಷ ಲೋಕೇಶ್, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಸೌಮ್ಯಾಶ್ರೀ ಹೆಗ್ಡೆ ಮತ್ತು ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನ ಪ್ರಾಂಶುಪಾಲ ಅಮರನಾಥ್ ಪಟ್ಟೆ ಉಪಸ್ಥಿತರಿದ್ದರು.
ವಿವಿಧ ಪ್ರಮುಖರುಗಳಾದ ಸುರೇಶ್ ಕಳ್ಳಾರೆ, ಉಮಾಕಾಂತ ಬೈಲಾಡಿ, ಕೆವಿಜಿ ವೈದ್ಯಕೀಯ ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ವಿನಯ್ ಬೆದ್ರುಪಣೆ ಮತ್ತು ರಘುಪತಿ, ಕೆವಿಜಿ ಕ್ಯಾಂಪಸ್’ನ ನಿರ್ವಾಹಕ ಉಮ್ಮರ್ ಸಭೆಯಲ್ಲಿ ಉಪಸ್ಥಿತರಿದ್ದರು.
ಭಾರತ ಮಾತೆಗೆ ದೀಪ ಪ್ರಜ್ವಲನೆ ಮತ್ತು ಪುಷ್ಪಾರ್ಚನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕ ಎವಿ ನಾರಾಯಣ ಅವರು ಸ್ವಾಗತಿಸಿ ಆಡಳಿತಾಧಿಕಾರಿ ಗುಡ್ಡಪ್ಪ ಗೌಡ ಬಲ್ಯ ವಂದಿಸಿದರು. ಆಡಳಿತ ಮಂಡಳಿಯ ನಿರ್ದೇಶಕರುಗಳಾದ ಶ್ರೀಮತಿ ಪುಷ್ಪಾವತಿ ಕಳುವಾಜೆ, ಸೀತಾರಾಮ ಕೇವಳ, ಗಂಗಾಧರ ಗೌಡ, ಕೊರಗಪ್ಪ ಗೌಡ, ಸೀತಾರಾಮ ಪೂಜಾರಿ ಮೇಲ್ಮಜಲು ಮತ್ತು ಉಪ ಪ್ರಾಂಶುಪಾಲೆ ಶ್ರೀಮತಿ ಸವಿತಾ ಕುಮಾರಿ ವಿವಿಧ ಕಾರ್ಯಗಳಲ್ಲಿ ಸಹಕರಿಸಿದರು. ಶಿಕ್ಷಕಿಯರಾದ ಯಶುಭಾ ರೈ ಮತ್ತು ರಾಧಾ ನಿರೂಪಣೆಗೈದರು. ಕಚೇರಿ ಗುಮಾಸ್ತೆ ಚಂದ್ರಿಕಾ ಪ್ರಾರ್ಥಿಸಿದರು.
























