ಕರ್ನಾಟಕದಲ್ಲಿ ಚುನಾವಣಾ ಅಕ್ರಮ ಆರೋಪ ಮಾಡಿದ ರಾಹುಲ್ ಗಾಂಧಿಯನ್ನು ತರಾಟೆಗೆ ತೆಗೆದುಕೊಂಡ ಚುನಾವಣಾ ಆಯೋಗ

ನವದೆಹಲಿ: ವಿಪಕ್ಷ ನಾಯಕ ರಾಹುಲ್ ಗಾಂಧಿ ಕರ್ನಾಟಕದಲ್ಲಿ ಚುನಾವಣಾ ಅಕ್ರಮ ನಡೆದಿದೆ ಎಂದು ಮಾಡಿದ್ದ ಆರೋಪಕ್ಕೆ ಚುನಾವಣಾ ಆಯೋಗ ಪ್ರತಿಕ್ರಿಯೆ ನೀಡಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಚುನಾವಣಾ ಆಯೋಗದ ಫ್ಯಾಕ್ಟ್ ಚೆಕ್ಕಿಂಗ್ ವಿಭಾಗ, ರಾಹುಲ್ ಗಾಂಧಿ ಆರೋಪ ತಳ್ಳಿ ಹಾಕಿರುವ ಚು. ಆಯೋಗ, ಅವರ ಹೇಳಿಕೆಗಳು ನಿರ್ಧಾರ ಮತ್ತು ಜನರನ್ನು ದಾರಿ ತಪ್ಪಿಸುವಂತಹವು ಎಂದು ಹೇಳಿದೆ. ಜನ ಪ್ರತಿನಿಧಿಗಳ ಕಾಯ್ದೆಯಡಿ ಈ ಬಗ್ಗೆ ದೂರು ನೀಡದ ರಾಹುಲ್ ಗಾಂಧಿ ಆಧಾರವಿಲ್ಲದೆ ಈ ರೀತಿ ಆರೋಪಗಳನ್ನು ಮಾಡುತ್ತಿರುವುದು ದುರಾದೃಷ್ಟಕರ ಎಂದು ತಿಳಿಸಿದೆ. ಹೈಕೋರ್ಟ್‌ನಲ್ಲಿಯೂ ಈ ಬಗ್ಗೆ ಅರ್ಜಿ ಸಲ್ಲಿಸಿಲ್ಲ ಯಾಕೆ ಎಂದು ಕೇಳಿದೆ. ಆಗ ಸುಮ್ಮನಿದ್ದು ಈಗ ಚು. ಆಯೋಗವನ್ನು ಬೆದರಿಸುವ ಕೆಲಸ ರಾಹುಲ್ ಗಾಂಧಿ ಮಾಡುತ್ತಿರುವುದಾಗಿ ಹೇಳಿದೆ.

ಹಾಗೆಯೇ ಚುನಾವಣೆ ನಡೆದು ವರ್ಷ ಕಳೆದ ಬಳಿಕ ರಾಹುಲ್ ಯಾತಕ್ಕಾಗಿ ಈ ಆರೋಪ ಮಾಡಿದ್ದಾರೆ ಎಂದು ಆಯೋಗ ಪ್ರಶ್ನೆ ಮಾಡಿದೆ. ಚುನಾವಣಾ ಪೂರ್ವದಲ್ಲೇ ಎಲ್ಲಾ ರಾಜಕೀಯ ಪಕ್ಷಗಳಿಗೂ ಮತದಾರರ ಪಟ್ಟಿಯ ಪ್ರತಿ ನೀಡಲಾಗಿತ್ತು. ಆಗ ಯಾತಕ್ಕೆ ಆಕ್ಷೇಪಣೆ ಸಲ್ಲಿಸಿಲ್ಲ ಎಂದು ಕೇಳಿದೆ. ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕವೂ ಸೋತ ಕಾಂಗ್ರೆಸ್ ಅಭ್ಯರ್ಥಿಗಳು ಈ ಬಗ್ಗೆ ಪ್ರಶ್ನೆ ಎತ್ತಿಲ್ಲ ಏಕೆ ಎಂದು ಚುನಾವಣಾ ಆಯೋಗ ರಾಹುಲ್ ಗಾಂಧಿಯನ್ನು ತರಾಟೆಗೆ ತೆಗೆದುಕೊಂಡಿದೆ.





















































 
 
error: Content is protected !!
Scroll to Top