ಧರ್ಮಸ್ಥಳ ಪ್ರಕರಣ: ದೂರುದಾರ ವ್ಯಕ್ತಿ SIT ಮುಂದೆ ಹಾಜರ್

ಮಂಗಳೂರು: ದೇಶ ವಿದೇಶಗಳಲ್ಲಿ ಸುದ್ದಿ ಮಾಡುತ್ತಿರುವ ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಡಲಾಗಿದೆ ಎಂಬ ಪ್ರಕರಣಕ್ಕೆ ‌ಸಂಬಂಧಿಸಿದಂತೆ SIT ಅಧಿಕಾರಿಗಳು ದೂರುದಾರ ವ್ಯಕ್ತಿಯ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಮಲ್ಲಿಕಟ್ಟೆಯಲ್ಲಿರುವ ‌SIT ಕಚೇರಿಗೆ ತನ್ನ ವಕೀಲರ ಜೊತೆಗೆ ದೂರುದಾರ ಅನಾಮಧೇಯ ಇಂದು ಆಗಮಿಸಿದ್ದಾಗಿ ತಿಳಿದು ಬಂದಿದೆ. ಆತನನ್ನು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

ಪ್ರಕರಣ ಕ್ಕೆ ಸಂಬಂಧಿಸಿದ ಹಾಗೆ SIT ಅಧಿಕಾರಿಗಳು ಈಗಾಗಲೇ ಸಂಬಂಧಪಟ್ಟ ಠಾಣೆಗೆ ತೆರಳಿ ಮಾಹಿತಿ ಕಲೆ ಹಾಕಿದ್ದಾರೆ ಎಂದು ಮಾಹಿತಿ ಇದೆ.





















































 
 
error: Content is protected !!
Scroll to Top