ಹಿಂದೂ ಮಠದಲ್ಲಿ ಮುಸ್ಲಿಂ ಮಹಿಳೆಯ ಧ್ಯಾನ

ಮಾನಸಿಕ ನೆಮ್ಮದಿಗಾಗಿ 11 ದಿನಗಳ ಧ್ಯಾನ ವ್ರತ

ಬೆಂಗಳೂರು: ಕೊಪ್ಪಳದ ಪ್ರಸಿದ್ಧ ಗವಿಮಠದಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಕಳೆದ ಎಂಟು ದಿನಗಳಿಂದ ಧ್ಯಾನಕ್ಕೆ ಮಾಡುತ್ತಿವುದು ಈ ಭಾಗದಲ್ಲಿ ಅಚ್ಚರಿಗೆ ಕಾರಣವಾಗಿದೆ. ಎಂಟು ದಿಗಳಿಂದ ನಿತ್ಯ ಮಠಕ್ಕೆ ಬರುತ್ತಿರುವ ಮಹಿಳೆ ನಾಗದೇವರ ಮುಂದೆ ಧ್ಯಾನಕ್ಕೆ ಕುಳಿತುಕೊಳ್ಳುತ್ತಿದ್ದಾರೆ.

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕುದರಿಮೋತಿ ಎಂಬಲ್ಲಿನ ನಿವಾಸಿ ಹಸೀನಾ ಬೇಗಂ ಎಂಬ ಮಹಿಳೆ ಗವಿ ಮಠದಲ್ಲಿ ನಿತ್ಯ ಒಂದು ಗಂಟೆಗಳ ಕಾಲ ಧ್ಯಾನ ಮಾಡುತ್ತಿದ್ದಾರೆ. ಮಠಕ್ಕೆ ಬರುವವರಲ್ಲಿ ಮುಸ್ಲಿಂ ಭಕ್ತರೂ ಇದ್ದಾರೆ. ಆದರೆ ಮುಸ್ಲಿಂ ಮಹಿಳೆಯೊಬ್ಬರು ಹೀಗೆ ಧ್ಯಾನ ಮಾಡುವುದು ಇದು ಪ್ರಥಮ ಎನ್ನಲಾಗಿದೆ.





















































 
 

ಗವಿ ಮಠದ ಶ್ರೀಗಳು ನಿತ್ಯ ಸಂಜೆ ಹೊತ್ತಲ್ಲಿ ಕುಳಿತುಕೊಳ್ಳುವ ಜಾಗದ ಮುಂದೆಯೇ ಮಹಿಳೆ ಧ್ಯಾನ ಮಾಡುತ್ತಿದ್ದು, ಮಾನಸಿಕ ನೆಮ್ಮದಿಗಾಗಿ ಇಲ್ಲಿ 11 ದಿನ ಧ್ಯಾನ ಮಾಡುವುದಾಗಿ ಹಸೀನಾ ಬೇಗಂ ಹೇಳಿಕೊಂಡಿದ್ದಾರೆ. ಮನಸ್ಸಿಗೆ ನೆಮ್ಮದಿ ಇರಲಿಲ್ಲ, ಬಹಳ ಕಷ್ಟ ಇತ್ತು. ಹೀಗಾಗಿ ಶ್ರೀಗಳ ಬಳಿ ಕೇಳಿಕೊಂಡು ಎಂಟು ದಿನದಿಂದ ಧ್ಯಾನ ಮಾಡುತ್ತಿದ್ದೇನೆ. ನಾನು ಮುಸ್ಲಿಂ ಆದರೂ ಎಲ್ಲಾ ಧರ್ಮ ಒಂದೇ ಎನ್ನುತ್ತಿದ್ದಾರೆ.

error: Content is protected !!
Scroll to Top