ಕೆಂಪು ಕಲ್ಲಿಗೂ ‌ಸ್ಯಾಂಡ್ ಬಜಾರ್ ಮಾದರಿಯಲ್ಲಿ ಆ್ಯಪ್: ಯು.ಟಿ. ಖಾದರ್

ಮಂಗಳೂರು: ಕೆಂಪು ಕಲ್ಲುಗಳಿಗೆ ‌ಸ್ಯಾಂಡ್ ಬಜಾರ್ ರೀತಿಯಲ್ಲೇ ಆ್ಯಪ್ ಆರಂಭಿಸಿ ಕಡಿಮೆ ಬೆಲೆಗೆ ನಿಗದಿತ ಸಮಯದಲ್ಲಿ ಪೂರೈಕೆಗೆ ವ್ಯವಸ್ಥೆ ಮಾಡಲಾಗುವುದು ಎಂದು ಸ್ಪೀಕರ್ ಯು. ಟಿ. ಖಾದರ್ ತಿಳಿಸಿದ್ದಾರೆ.

ಸಾಂಪ್ರದಾಯಿಕ ರೀತಿಯಲ್ಲಿ ಕೆಂಪು ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಸಂಪ್ರದಾಯ ಬದಲಾವಣೆ ಮಾಡಲಾಗದು. ಆದರೆ ಕಾನೂನು ಬದಲಾಯಿಸಬಹುದು. ಕೆಲವು ನಿಯಮಗಳನ್ನು ಆಚರಣೆಗೆ ತರುವ ಮೂಲಕ ಜನಸಾಮಾನ್ಯರಿಗೆ ಸುಲಭವಾಗಿ ಕೆಂಪು ಕಲ್ಲು ದೊರೆಯುವಂತೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಕರಾವಳಿಯಲ್ಲಿ ಮಳೆ ಹೆಚ್ಚು. ಉಪ್ಪಿನ ಅಂಶ ಜಾಸ್ತಿ. ಹೀಗಾಗಿ ಸುರಕ್ಷತೆಯ ದೃಷ್ಟಿಯಿಂದ ಕೆಂಪು ಕಲ್ಲಿನಲ್ಲಿ ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಸಾಮಾನ್ಯ ಜನರಿಗೆ ಕಡಿಮೆ ಬೆಲೆಗೆ ಕಲ್ಲು ದೊರೆಯುವ ನಿಟ್ಟಿನಲ್ಲಿ ಕ್ವಾರಿಗಳನ್ನು ಗುತ್ತಿಗೆ ನೀಡಲು ನಿಯಮಗಳನ್ನು ಸರಳೀಕರಿಸಲಾಗುವುದು ಎಂದು ವಿವರಿಸಿದ್ದಾರೆ.





















































 
 

ಜಿಲ್ಲೆಯಲ್ಲಿ ಕೆಂಪು ಕಲ್ಲು, ಮರಳು ಸಮಸ್ಯೆ ಬಗೆಹರಿಸದೇ ಇದ್ದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದೆ.

error: Content is protected !!
Scroll to Top