ಕರ್ನಾಟಕದಲ್ಲಿ ಚುನಾವಣಾ ಕಳ್ಳತನ: ರಾಹುಲ್ ಗಾಂಧಿ ಆರೋಪಕ್ಕೆ ‌ಸಿಎಂ ಸಿದ್ದರಾಮಯ್ಯ ಏನಂದ್ರು ಗೊತ್ತಾ?

ನವದೆಹಲಿ: ಕರ್ನಾಟಕದಲ್ಲಿ ಚುನಾವಣೆಯ ಸಂದರ್ಭದಲ್ಲಿ ಅಕ್ರಮ ನಡೆದಿದ್ದು, ಈ ಕುರಿತ ಎಲ್ಲಾ ವಿವರಗಳನ್ನು ಶೀಘ್ರವೇ ಚುನಾವಣಾ ಆಯೋಗ ಮತ್ತು ಜನತೆಯ ಮುಂದಿಡಲಾಗುವುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಈ ಸಂಬಂಧ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಭಾರತದಲ್ಲಿ ಚುನಾವಣಾ ಕಳ್ಳತನಗಳು ನಡೆಯುತ್ತಿರುವುದು ‌ಸತ್ಯ. ಮಹಾರಾಷ್ಟ್ರ ಚುನಾವಣೆಯಲ್ಲಿ ನಡೆದ ಮ್ಯಾಚ್ ಫಿಕ್ಸಿಂಗ್ ಬಗ್ಗೆ ವರದಿಗಳನ್ನು ನಾವು ಬಹಿರಂಗ ಮಾಡಿದ್ದೆವು. ಹೀಗೆಯೇ ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯಲ್ಲಿ ನಡೆದ ಕಳ್ಳಾಟಗಳನ್ನು ಸಹ ಶೀಘ್ರ ಬಯಲು ಮಾಡುತ್ತೇವೆ. ದೊಡ್ಡ ಮತಗಳ ಕಳ್ಳಾಟ ಕರ್ನಾಟಕದಲ್ಲಿ ನಡೆದಿದ್ದು, ಇದನ್ನು ಸಾಕ್ಷಿ ಸಮೇತ ಜನರ ಮುಂದೆ ಬಹಿರಂಗ ಮಾಡುವುದಾಗಿ ತಿಳಿಸಿದ್ದಾರೆ

ರಾಹುಲ್ ಗಾಂಧಿಯವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ನನಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಹಾಗಾಗಿ ನಾನು ಈ ಸಂಬಂಧ ಮಾತನಾಡುವುದಿಲ್ಲ. ಕರ್ನಾಟಕದಲ್ಲಿ ತಲಾ ಆದಾಯ ಹೆಚ್ಚಳ ಕಾಣುತ್ತಿದ್ದು, ಇದಕ್ಕೆ ಸರ್ಕಾರದ ಗ್ಯಾರಂಟಿ ಯೋಜನೆಗಳು ಸಹ ಕಾರಣ ಎಂದು ಅವರು ತಿಳಿಸಿದ್ದಾರೆ.





















































 
 
error: Content is protected !!
Scroll to Top