8 ತಿಂಗಳ ಮಗುವನ್ನು ತಲೆಕೆಳಗಾಗಿ ಹಿಡಿದು ಊರು ಸುತ್ತಿದ ಕ್ರೂರಿ ತಂದೆ

ಹೆಂಡತಿ ವರದಕ್ಷಿಣೆ ತರಲಿಲ್ಲ ಎಂಬ ಸಿಟ್ಟಿನಲ್ಲಿ ಎಸಗಿದ ಕೃತ್ಯ

ಲಖನೌ: ಉತ್ತರ ಪ್ರದೇಶದ ರಾಂಪುರದಲ್ಲಿ ಕ್ರೂರಿ ತಂದೆಯೊಬ್ಬ ಹೆಂಡತಿ ಮೇಲಿನ ಸಿಟ್ಟಿಗೆ ತನ್ನ ಎಂಟು ತಿಂಗಳು ಪ್ರಾಯದ ಹಸುಗೂಸನ್ನು ತಲೆಕೆಳಗಾಗಿ ಹಿಡಿದುಕೊಂಡು ಊರಿಡೀ ಸುತ್ತುಹಾಕಿದ ಅಮಾನವೀಯ ಘಟನೆಯೊಂದು ನಡೆದಿದ್ದು, ಇದರ ವಿಡಿಯೋ ಈಗ ಎಲ್ಲೆಡೆ ವೈರಲ್‌ ಆಗಿದೆ.

ವರದಕ್ಷಿಣೆಗಾಗಿ ಪತ್ನಿ ಜತೆ ಜಗಳವಾಡಿದ ಬಳಿಕ ಈ ಪಾಪಿ ತಂದೆ ತನ್ನ ಮಗುವನ್ನು ತಲೆ ಕೆಳಗಾಗಿಸಿ ಹಿಡಿದುಕೊಂಡು ಊರಿಡೀ ತಿರುಗಾಡಿದ್ದಾನೆ. ಆರೋಪಿಯನ್ನು ಸಂಜು ಎಂದು ಗುರುತಿಸಲಾಗಿದೆ. ಸುಮನ್‌ ಎಂಬ ಮಹಿಳೆ ಜೊತೆ 2013ರಲ್ಲಿ ಇವನ ಮದುವೆಯಾಗಿತ್ತು. ಸಂಜು ಪದೇಪದೆ ಬಳಿ ಹಣಕ್ಕಾಗಿ ಪತ್ನಿಗೆ ಕಿರುಕುಳ ನೀಡುತ್ತಿದ್ದ. 2 ಲಕ್ಷ ಹಾಗೂ ಕಾರು ತರುವಂತೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಎಂದು ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ.





















































 
 

ಕೆಲದಿನಗಳ ಹಿಂದೆ ಇದೇ ರೀತಿ ಪತ್ನಿಗೆ ಹಿಂಸೆ ನೀಡಿದ ಬಳಿಕ ಮಗುವಿನ ಕಾಲು ಹಿಡಿದುಕೊಂಡು ಊರಿಡೀ ಸುತ್ತಾಡಿ ಬಂದಿದ್ದಾನೆ. ಇದರ ಪರಿಣಾಮವಾಗಿ ಮಗುವಿನ ಸೊಂಟದ ಮೂಳೆ ತಪ್ಪಿದೆ. ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾರೋ ಆತನ ಈ ಕೃತ್ಯದ ವಿಡಿಯೋ ಮಾಡಿ ಸೋಷಿಯಲ್‌ ಮೀಡಿಯಾಕ್ಕೆ ಅಪ್‌ಲೋಡ್‌ ಮಾಡಿದ ಕಾರಣ ಪ್ರಕರಣ ಬೆಳಕಿಗೆ ಬಂದಿದೆ.

error: Content is protected !!
Scroll to Top