ನವದೆಹಲಿ: ಕಾಂಗ್ರೆಸ್ ಬೃಹತ್ ಮೊತ್ತದ ದೇಣಿಗೆಗಳ ಮೇಲೆ ತೆರಿಗೆ ವಿನಾಯಿತಿ ಕೋರಿ ಮಾಡಿದ್ದ ಮನವಿಯನ್ನು ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ ತಿರಸ್ಕರಿಸಿದೆ.
2018-19 ನೇ ವರ್ಷಕ್ಕೆ ಸಂಬಂಧಿಸಿದ 199.15 ಕೋಟಿ ರೂ. ಆದಾಯಕ್ಕೆ ತೆರಿಗೆ ವಿನಯಿತಿಗಾಗಿ ಕಾಂಗ್ರೆಸ್ ಪಕ್ಷ ಮನವಿ ಮಾಡಿಕೊಂಡಿತ್ತು. ಈ ಮನವಿಯನ್ನು ITAT ತಿರಸ್ಕರಿಸಿದೆ.
ಕಾಂಗ್ರೆಸ್ ತಡವಾಗಿ ಐಟಿ ರಿಟರ್ನ್ಸ್‌ಗಳನ್ನು ಸಲ್ಲಿಕೆ ಮಾಡಿದ್ದು, ಜೊತೆಗೆ ನಗದು ದೇಣಿಗೆ ಮಿತಿಗಳ ಉಲ್ಲಂಘನೆ ಮಾಡಿದ್ದು ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಲ್ಲಿಸಿದ್ದ ತೆರಿಗೆ ವಿನಾಯಿತಿ ಅರ್ಜಿಯನ್ನು ವಜಾ ಮಾಡಿರುವುದಾಗಿದೆ.
























