ಧರ್ಮಸ್ಥಳ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು: ಸಿ.ಟಿ. ರವಿ

ಧರ್ಮಸ್ಥಳ‌ದ ತೇಜೋವಧೆ ಮಾಡಲು ತನಿಖೆಗೂ ಮೊದಲೇ ತೀರ್ಪು ನೀಡುವ ಕೆಲಸ ಕೆಲವರಿಂದಾಗುತ್ತಿದೆ

ಬೆಂಗಳೂರು: ರಾಜ್ಯ ಸರ್ಕಾರ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸಾಲು ಸಾಲು ಹತ್ಯೆಗಳ ತನಿಖೆಗೆ SIT ರಚಿಸಿದ್ದು, ಇದು ಸ್ವಾಗತಾರ್ಹ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದ್ದಾರೆ.

ತಪ್ಪು ಯಾರೇ ಮಾಡಿರಲಿ. ತಪ್ಪಿತಸ್ಥರಿಗೆ ಶಿಕ್ಷೆ ಆಗಲೇ ಬೇಕು. ಆದರೆ ಕೆಲವರು ತನಿಖೆ ಯಾಗಿ ತೀರ್ಪು ಬರುವುದಕ್ಕೂ ‌ಮೊದಲೇ ತಮ್ಮ ತೀರ್ಪು ನೀಡುತ್ತಿದ್ದು ಇದು ಸ್ವೀಕಾರಾರ್ಹ ಅಲ್ಲ. ಈ ಪ್ರಕರಣದಲ್ಲಿ ಧರ್ಮಸ್ಥಳ ಎಂಬ ಸಂಸ್ಥೆಯನ್ನು, ಅದರ ಮುಖ್ಯಸ್ಥರನ್ನೇ ಅವಮಾನಿಸುವುದು ಸರಿಯಾದ ಕ್ರಮ ಅಲ್ಲ. ಇಂತಹ ಷಡ್ಯಂತ್ರದ ವಿರುದ್ಧ ನಾವಿದ್ದೇವೆ ಎಂದು ತಿಳಿಸಿದ್ದಾರೆ.





















































 
 

ಚೋಳರ ಕಾಲದ ಅನೇಕ ದೇವಾಲಯಗಳನ್ನು ಧರ್ಮಸ್ಥಳ ಪುನರ್ ನಿರ್ಮಾಣ ಮಾಡಿದೆ. ಸ್ವಯಂಸೇವಾ ಸಂಸ್ಥೆಗಳ ಮೂಲಕ ಸುಮಾರು ಐವತೈದು ಲಕ್ಷ ಸದಸ್ಯರು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಜೊತೆಗೆ ಕೈ ಜೋಡಿಸಿ ಕೆಲಸ ಮಾಡುತ್ತಿದ್ದಾರೆ. ಸುಮಾರು 900 ಕೆರೆಗಳ ಜೀರ್ಣೋದ್ಧಾರ ಕಾರ್ಯ ಧರ್ಮಸ್ಥಳದಿಂದಾಗಿದೆ ಎಂದಿದ್ದಾರೆ.

ಧರ್ಮಸ್ಥಳವನ್ನು ಗುರಿಯಾಗಿಸಿ ತೇಜೋವಧೆ ಮಾಡುವುದು, ತನಿಖೆಯೇ ಮಾಡದೆ ಗಲ್ಲಿಗೇರಿಸುವುದು ಮುಂತಾದವುಗಳು ಸ್ವೀಕಾರಯೋಗ್ಯವಲ್ಲ. ಸಜ್ಜನರ ಮೌನ ದುರುಳರಿಗೆ ದಾರಿ ಮಾಡಿಕೊಡುವುದಕ್ಕೆ ನಾವು ಬಿಡಲಾರೆವು. ಇಂತ ಪ್ರವೃತ್ತಿ ಮುಂದುವರೆದರೆ ನಾವು ಬಿಡಲಾರೆವು ಎಂದು ಎಚ್ಚರಿಸಿದ್ದಾರೆ‌.

error: Content is protected !!
Scroll to Top