ವಿವಿ ಕುಲಪತಿಯ ವಾಟ್ಸಪ್‌ ನಂಬರನ್ನೇ ಹ್ಯಾಕ್‌ ಮಾಡಿದ ಸೈಬರ್‌ ಚೋರರು

ಲಿಂಕ್‌ ಕ್ಲಿಕ್‌ ಮಾಡಿದಾಗ ಸ್ನೇಹಿತರಿಗೆ ಹಣ ಕಳುಹಿಸಲು ಮನವಿ ಸಂದೇಶ ರವಾನೆ

ಮಂಗಳೂರು: ನಗರದ ಖಾಸಗಿ ಡೀಮ್ಡ್ ಟು ಬಿ ವಿಶ್ವವಿದ್ಯಾಲಯವೊಂದರ ಕುಲಪತಿಯ ವಾಟ್ಸಪ್ ಅಕೌಂಟನ್ನೇ ಸೈಬರ್‌ ಚೋರರು ಹ್ಯಾಕ್‌ ಮಾಡಿದ ಘಟನೆ ಸಂಭವಿಸಿದೆ. ವಾಟ್ಸಪ್‌ ಹ್ಯಾಕ್‌ ಮಾಡಿ ಅವರ ಸಂಪರ್ಕದಲ್ಲಿದ್ದವರ ಮೊಬೈಲ್ ನಂಬರ್‌ಗಳಿಗೆ ಹಣಕ್ಕಾಗಿ ಸಂದೇಶ ರವಾನೆಯಾಗಿದೆ. ಈ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಖಾಸಗಿ ಡೀಮ್ಡ್ ಟು ಬಿ ವಿಶ್ವವಿದ್ಯಾಲಯದ ಕುಲಪತಿಯ ಮೊಬೈಲ್ ಫೋನ್‌ಗೆ ಅಪರಿಚಿತ ವ್ಯಕ್ತಿಯೋರ್ವ ಕರೆ ಮಾಡಿ ಕೊರಿಯರ್ ಕಂಪನಿಯಿಂದ ಎಂದು ಪರಿಚಯಿಸಿಕೊಂಡಿದ್ದ. ಆತ ಬಳಿಕ ಕುಲಪತಿಯ ವಾಟ್ಸ್‌ಪ್‌ಗೆ ಲಿಂಕ್ ಕಳುಹಿಸಿದ್ದ. ಅವರು ಲಿಂಕ್ ಕ್ಲಿಕ್ ಮಾಡಿದ ಕೂಡಲೇ ಅವರ ಸಂಪರ್ಕದಲ್ಲಿದ್ದ ಇತರರ ಮೊಬೈಲ್ ನಂಬರ್‌ಗಳಿಗೆ ಹಣಕ್ಕಾಗಿ ಸಂದೇಶ ರವಾನೆಯಾಗಿದೆ. ಇದನ್ನು ಅರಿತ ಅವರು ತಕ್ಷಣ ವಾಟ್ಸಪ್ ಅಕೌಂಟ್ ಆಗಿರುವ ಬಗ್ಗೆ ಎಲ್ಲರಿಗೂ ಮಾಹಿತಿ ರವಾನಿಸಿದ್ದಾರೆ. ಿದರಿಂದಾಗಿ ಅವರ ಸ್ನೇಹಿತರು ಹಣ ಕಳೆದುಕೊಳ್ಳುವುದು ತಪ್ಪಿದೆ. ಬಳಿಕ ಈ ಬಗ್ಗೆ ಅವರು ಸೆನ್ ಠಾಣೆಗೆ ದೂರು ನೀಡಿದ್ದಾರೆ.





















































 
 
error: Content is protected !!
Scroll to Top