ಪ್ಯಾರಾಲಿಂಪಿಕ್ ಕ್ರೀಡಾಪಟುವಿಗೆ ಬಹುಮಾನ ನೀಡದ ರಾಜ್ಯ ಸರ್ಕಾರ: ದಂಡ ವಿಧಿಸಿದ ಹೈ ಕೋರ್ಟ್

ಬೆಂಗಳೂರು: ಕೈಗಳಿಲ್ಲದಿದ್ದರೂ‌ ಪ್ಯಾರಾಲಿಂಪಿಕ್ಸ್‌ಯ ಈಜು ಸ್ಪರ್ಧೆಯಲ್ಲಿ ಯಶ ಗಳಿಸಿದ ವಿಶ್ವಾಸ್ ಕೆ. ಎಸ್. ಅವರನ್ನು ಗೌರವಿಸದ ಹಿನ್ನೆಲೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ದಂಡ ವಿಧಿಸಿದ್ದು, ಕ್ರೀಡಾಪಟುವಿಗೆ ಬಹುಮಾನ ನೀಡುವಂತೆಯೂ ಆದೇಶಿಸಿದೆ.

ಪ್ಯಾರಾಲಿಂಪಿಕ್ಸ್‌‌ನಲ್ಲಿ ಅಂತರಾಷ್ಟ್ರೀಯ ವೇದಿಕೆಯಲ್ಲಿ ಜಯಶಾಲಿಯಾದಾಗ ಅವರನ್ನು ಸರ್ಕಾರ ಗೌರವಿಸುವ ಕೆಲಸ ಮಾಡಬೇಕು. ಹಾಗೆಯೇ ಅವರ ಹಕ್ಕುಗಳನ್ನು ಹತ್ತಿಕ್ಕದ ಹಾಗೆಯೂ ಕೋರ್ಟ್ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ವಿಶ್ವಾಸ್ ಅವರು 2017 ಮತ್ತು 2023 ರಲ್ಲಿ ಪ್ಯಾರಾಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಿದರೂ ಅವರಿಗೆ ಬಹುಮಾನ ನೀಡಲಾಗಿಲ್ಲ. ಈ ಸಂಬಂಧ ಹೈಕೋರ್ಟ್ ಮೊರೆ ಹೋಗಿದ್ದ ವಿಶ್ವಾಸ್ ಅವರ ಪರ ರಾಜ್ಯ ಸರ್ಕಾರಕ್ಕೆ ನೊಟೀಸ್ ‌ನೀಡಿದ ಬಳಿಕ 4.74 ಲಕ್ಷ ರೂ. ಬಿಡುಗಡೆ ಮಾಡಲಾಗಿತ್ತು.





















































 
 

ವಿಶ್ವಾಸ್ ಅವರ ಬಹುಮಾನದ ಮೊತ್ತ 6 ಲಕ್ಷಗಳಲ್ಲಿ 1.26 ಲಕ್ಷ ರೂ. ಬಾಕಿ ಉಳಿಸಿದ ಸಂಬಂಧ ಹೈಕೋರ್ಟ್ ಮೊರೆ ಹೋಗಿದ್ದ ವಿಶ್ವಾಸ್ ಅವರಿಗೆ ಸರ್ಕಾರ 2 ಲಕ್ಷ ರೂ. ಮೊಕದ್ದಮೆ ವೆಚ್ಚ ಪಾವತಿಸುವಂತೆಯೂ ಸೂಚಿಸಲಾಗಿದೆ. ಹಾಗೆಯೇ ಬಹುಮಾನದಲ್ಲಿ ಬಾಕಿ ಉಳಿದ 1.26 ಲಕ್ಷ ರೂ. ಗಳನ್ನು ಎರಡು ವಾರಗಳಲ್ಲಿ ಪಾವತಿಸಬೇಕು. ತಪ್ಪಿದಲ್ಲಿ ಆ ಮೊತ್ತ ಅವರಿಗೆ ತಲುಪುವ ವರೆಗೆ ವಿಳಂಬ ಮೊತ್ತ 1000 ರೂ. ಗಳನ್ನು ಪಾವತಿ ಮಾಡಬೇಕು ಎಂದು ನಿರ್ದೇಶಿಸಿದೆ.

error: Content is protected !!
Scroll to Top