ಮತ್ತೆ ಬಿಜೆಪಿ ಸೇರುತ್ತಾರಾ ಯತ್ನಾಳ್?

ಕುಟುಂಬ ರಾಜಕಾರಣದ ಬಗ್ಗೆ ಯತ್ನಾಳ್ ಮಾತು

ವಿಜಯಪುರ: ಈವರೆಗೆ ಬಿಜೆಪಿಯಿಂದ ನನ್ನನ್ನು ಮೂರು ಬಾರಿ ಉಚ್ಛಾಟನೆ ಮಾಡಲಾಗಿದೆ. ಆ ಲೆಕ್ಕದಲ್ಲಿ ನನ್ನನ್ನು 18 ವರ್ಷಗಳ ಕಾಲ ಬಿಜೆಪಿಗೆ ಸೇರಿಸಬಾರದು. ಬಿಜೆಪಿಗರು ‌ನನ್ನನ್ನು ಆರು ವರ್ಷಗಳ‌ ಕಾಲ ಉಚ್ಛಾಟಿಸಿರುವುದಾಗಿ ಹೇಳಿ ಕಳಿಸುತ್ತಾರೆ. ಆದರೆ ಮುಂದಿನ ಎರಡು ತಿಂಗಳಲ್ಲಿ ನನ್ನನ್ನು ಮತ್ತೆ ಪಕ್ಷಕ್ಕೆ ಕರೆದುಕೊಳ್ಳುತ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಹೇಳಿದ್ದಾರೆ.

ನಮ್ಮಲ್ಲಿ ತಾಕತ್ತು, ಶಕ್ತಿ ಇದ್ದರೆ ಯಾರು ಬೇಕಾದರೂ ನಮ್ಮನ್ನು ಬಾ.. ಬಾ.. ಎಂದು ಕರೆಯುತ್ತಾರೆ. ಇಲ್ಲದೇ ಹೋದರೆ ಅಪ್ಪಾಜಿ ಅಪ್ಪಾಜಿ ಎನ್ನುತ್ತಾ ಬೇರೆಯವರ ಕಾಲು ಹಿಡಿಯುವ ಸ್ಥಿತಿ ಬರುತ್ತದೆ ಎಂದು ಪಾಟೀಲ್ ತಿಳಿಸಿದ್ದಾರೆ.





















































 
 

ಪ್ರಧಾನಿ ಮೋದಿ ಅವರು ಬಿಜೆಪಿಯಲ್ಲಿ ಕುಟುಂಬ ರಾಜಕಾರಣ, ವಂಶವಾದ, ಭ್ರಷ್ಟಾಚಾರ ಸಹ್ಯವಲ್ಲ. ಅದನ್ನು ಪಕ್ಷ ಅಂಗೀಕರಿಸುವುದಿಲ್ಲ ಎನ್ನುತ್ತಾರೆ. ಆದರೆ, ರಾಜ್ಯದ ಬಿಜೆಪಿಯಲ್ಲಿ ಕುಟುಂಬ ರಾಜಕೀಯ, ಭ್ರಷ್ಟಾಚಾರ ಎಲ್ಲವೂ ಇದೆ. ಬೇಕಾದರೆ ಇದಕ್ಕೆ ಸಾಕ್ಷಿ ತಂದುಕೊಡುವುದಾಗಿ ಅವರು ನುಡಿದಿದ್ದಾರೆ.

error: Content is protected !!
Scroll to Top