ಪುತ್ತೂರು: ಬಡಗನ್ನೂರು ಗ್ರಾಮದ ಪಡುಮಲೆ ನಿವಾಸಿ ಮಾಂಬಾಡಿ ರಾಮಕೃಷ್ಣ ಭಟ್ (95) ಅಲ್ಪ ಕಾಲದ ಅಸೌಖ್ಯದಿಂದ ಬುಧವಾರ ನಿಧನರಾದರು.
ಪ್ರಸಿದ್ಧ ಜ್ಯೋತಿಷಿ ಮಾಂಬಾಡಿ ಈಶ್ವರ ಭಟ್ಟರ ಪುತ್ರರಾಗಿದ್ದ ಅವರು ತಮ್ಮ ಚಿಕ್ಕಪ್ಪ ಮಾಂಬಾಡಿ ನಾರಾಯಣ ಭಟ್ಟರಿಂದ ಮದ್ದಳೆ ಕಲಿತು ಹವ್ಯಾಸಿ ಕಲಾವಿದರಾಗಿದ್ದರು. ಕೂಡ್ಲು ಮೇಳದ ಸಂಚಾಲಕರಾಗಿಯೂ ಸೇವೆ ಸಲ್ಲಿಸಿದ್ದು, ಪಡುಮಲೆ ಕೋಟಿ-ಚೆನ್ನಯ ಯುವಕ ಮಂಡಲ ಹಾಗೂ ಬೆನಕ ಯಕ್ಷ ಕಲಾ ವೇದಿಕೆ ಪ್ರಶಸ್ತಿಗೆ ಭಾಜನರಾಗಿದ್ದರು.
ಅವರು ನಾಲ್ವರು ಪುತ್ರರು, ನಾಲ್ಕು ಮಂದಿ ಪುತ್ತಿಯರು, ಮೊಮ್ಮಕ್ಕಳು, ಮರಿಮಕ್ಕಳನ್ನು ಅಗಲಿದ್ದಾರೆ.