ರಾಜ್ಯದಲ್ಲಿನ್ನು VIP ವಾಹನಗಳ ಸೈರನ್‌ಗಿಲ್ಲ ಅವಕಾಶ: ಪೊಲೀಸ್ ಮಹಾನಿರ್ದೇಶಕರಿಂದ ಮಹತ್ವದ ಆದೇಶ

ಬೆಂಗಳೂರು: ಗಣ್ಯ ವ್ಯಕ್ತಿಗಳ ವಿಐಪಿ ಸಂಚಾರದ ವೇಳೆ ಸೈರನ್ ‌ಬಳಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ. ಸಲೀಂ ಅವರು ಮಹತ್ವದ ಆದೇಶ‌ ಹೊರಡಿಸಿದ್ದಾರೆ.

ಶಬ್ಧ ಮಾಲಿನ್ಯ ತಪ್ಪಿಸುವುದು ಮುತ್ತು ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಸೈರನ್ ‌ನಿಷೇಧಿಸಲಾಗಿದೆ. ಜೊತೆಗೆ ಗಣ್ಯ ವ್ಯಕ್ತಿಗಳ ವಾಹನಗಳ ಸೈರನ್ ಶಬ್ದದಿಂದ ಅವರು ಸಂಚರಿಸುವ ಮಾರ್ಗದ ಬಗ್ಗೆ ಅನಧಿಕೃತ ವ್ಯಕ್ತಿಗಳಿಗೂ ಮಾಹಿತಿ ಸಿಗುತ್ತದೆ. ಕೆಲ ಸಂದರ್ಭದಲ್ಲಿ ಇದು ಅಪಾಯಕ್ಕೂ ‌ಕಾರಣವಾಗುತ್ತದೆ ಎಂಬ ಕಾರಣಕ್ಕೆ ಸೈರನ್ ‌ನಿಷೇಧಕ್ಕೆ ಮುಂದಾಗಿರುವುದಾಗಿದೆ‌.

ಸಾರ್ವಜನಿಕ ಸ್ಥಳಗಳಲ್ಲಿ ಸೈರನ್ ಬಳಕೆಯಿಂದ ಸಾಮಾನ್ಯ ಜನರಿಗೂ ಸಮಸ್ಯೆಯಾಗುತ್ತದೆ. ವಿಐಪಿ ಸಂಚಾರದ ತುರ್ತು ಸಂದರ್ಭದಲ್ಲಿ ವೈರ್‌ಲೆಸ್ ಕಮ್ಯೂನಿಕೇಶನ್ ಮೂಲಕ ಮಾಹಿತಿ ರವಾನಿಸುವಂತೆ‌ ತಿಳಿಸಲಾಗಿದೆ.





















































 
 

ಸೈರನ್‌ಗಳನ್ನು ‌ತುರ್ತು ಸಂದರ್ಭದಲ್ಲಿ ಆಂಬ್ಯುಲೆನ್ಸ್, ಪೊಲೀಸ್, ಫೈರ್ ಸರ್ವೀಸ್ ಮಾತ್ರವೇ ಬಳಸುವಂತೆ ಸೂಚಿಸಲಾಗಿದೆ. ಸುಪ್ರೀಂ ಕೋರ್ಟ್‌ನಿಂದಲೂ ಇದೇ ಆದೇಶ ಇದ್ದು, ಕಾನೂನು ಉಲ್ಲಂಘಿಸಿದಲ್ಲಿ ಶಿಸ್ತು ಕ್ರಮದ ಎಚ್ಚರಿಕೆ ನೀಡಲಾಗಿದೆ.

error: Content is protected !!
Scroll to Top