ಆರ್ಯಾಪು ನಿವಾಸಿ ವಿಶ್ವನಾಥ ನಾಯ್ಕ ನಿಧನ

ಪುತ್ತೂರು: ತಾಲೂಕಿನ ಆರ್ಯಾಪು ಗ್ರಾಮದ ಮೇಗಿನ‌ ಪಂಜ ನಿವಾಸಿ, ಅರ್ಯಾಪು ಗ್ರಾಪಂನ ಮಾಜಿ ಅಧ್ಯಕ್ಷೆ ಸರಸ್ವತಿ ಅವರ ಪತಿ ವಿಶ್ವನಾಥ ನಾಯ್ಕ(42) ಅವರು ಸೋಮವಾರ ಬೆಳಗ್ಗೆ ನಿಧನರಾದರು.

ಕೂಲಿ ಕಾರ್ಮಿಕರಾಗಿದ್ದ ವಿಶ್ವನಾಥ ಅವರು ಭಾನುವಾರ ಸಂಜೆ ಅಸ್ವಸ್ಥತೆಗೆ ಒಳಗಾಗಿದ್ದರು. ಅವರನ್ನು ಚಿಕಿತ್ಸೆಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬೆಳಗ್ಗೆ ಅವರು ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಪತ್ನಿ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.





















































 
 
error: Content is protected !!
Scroll to Top